ಬಳ್ಳಾರಿ: ಪ್ರಧಾನಿ ಮೋದಿ ಫೋಟೋ ಬಳಸಿ ಕೀಳುಮಟ್ಟದ ಪೋಸ್ಟ್, ಆರೋಪಿಗೆ ಕಪಾಳಮೋಕ್ಷ, ಥಳಿತ
ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಕೀಳುಮಟ್ಟದಲ್ಲಿ ಬಳಕ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಹಿಡಿದು ಸ್ಥಳೀಯರೇ ಥಳಿಸಿದ್ದಾರೆ.

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಕೀಳುಮಟ್ಟದಲ್ಲಿ ಬಳಕ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಹಿಡಿದು ಸ್ಥಳೀಯರೇ ಥಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ನಿವಾಸಿ ನಭೀ ರಸೂಲ್ ಎಂಬಾತ ಥಳಿತಕ್ಕೊಳಗಾದ ವ್ಯಕ್ತಿ.
ಪ್ರದಾನಿ ನರೇಂದ್ರ ಮೋದಿಯವರ ಕೊರಳ ಪಟ್ಟಿ ಹಿಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎಳೆದೊಯ್ಯುವ ದೃಶ್ಯವನ್ನು ಸೃಷ್ಠಿಸಿ ಹರಿಬಿಟ್ಟಿದ್ದ ಕಿಡಿಗೇಡಿ ರಸೂಲ್. ಅದರ ಜೊತೆ ಇನ್ನೂ ಕೆಲವು ಆಕ್ಷೇಪಾರ್ಹ ಫೋಟೊಗಳನ್ನು ರಸೂಲ್ ಹರಿಬಿಟ್ಟಿದ್ದ.
ಇದನ್ನು ಗಮನಿಸಿದ ಶ್ರೀ ರಾಮಸೇನೆಯ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ ನಭೀ ರಸೂಲ್ ನನ್ನು ಹಿಡಿದು ಭಾರತ್ ಮಾತಾಕಿ ಜೈ ಹೇಳಿಸಿ ಕ್ಷಮೆ ಕೇಳಿಸಿದ್ದಾರೆ.
ಆಗಿರುವ ಅಪಚಾರಕ್ಕೆ ಗ್ರಾಮದ ಹಿರಿಯರ ಮುಂದೆ ನಭಿಯಿಂದ ಕ್ಷಮೆ ಕೇಳಿಸಿ ಶ್ರೀರಾಮಸೇನೆ ಕಾರ್ಯಕರ್ತರು ತೆರಳಿದರು. ಸ್ಥಳದಲ್ಲೇ ಇದ್ದ ನಭಿ ಸಹೋದರ ಸ್ವತಃ ನಭಿಗೆ ಕಪಾಳ ಮೋಕ್ಷ ಮಾಡಿ ಶ್ರೀರಾಮ ಸೇನೆ ಕಾರ್ಯಕರ್ತರನ್ನ ಕ್ಷಮೆ ಕೇಳಿ ಮರಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


