ಅನೈತಿಕ ಸಂಬಂಧ ಹಿನ್ನೆಲೆ: ಬೆಳಗಾವಿ ಗ್ರಾಮ ಪಂಚಾಯಿತಿ ಸದಸ್ಯನ ಕಗ್ಗೊಲೆ
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮ ಪಂಚಾಯಿತಿ ಸದಸ್ಯನೋರ್ವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ.

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮ ಪಂಚಾಯಿತಿ ಸದಸ್ಯನೋರ್ವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ.
ಚನ್ನಮ್ಮನ ಕಿತ್ತೂರು ತಾಲೂಕಿನ ಬಸರಖೋಡ ಗ್ರಾಮದ ಬಸವರಾಜ ರುದ್ರಪ್ಪ ದೊಡಮನಿ (35) ಕೊಲೆಯಾದವರು.
ಬಸರಖೋಡ ಗ್ರಾಮದ ಗೋಪಾಲ ಕಲ್ಲಪ್ಪ ಪಾಗಾದ (36), ಮಹಾಂತೇಶ ಕಲ್ಲಪ್ಪ ಪಾಗಾದ (32) ಮತ್ತು ರುಕ್ಮಿಣಿ ಗೋಪಾಲ ಪಾಗಾದ ಎನ್ನುವವರು ಬಸವರಾಜ ದೊಡಮನಿಯನ್ನು ಕೊಲೆ ಮಾಡಿ ಪರಾರಾಯಾಗಿದ್ದಾರೆ.
ಕಣ್ಣೆಗೆ ಖಾರದ ಪುಡಿ ಎರಚಿ ನಂತರ ಆತನ ಮೇಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದ ಮಡುವಿನಲ್ಲಿಬಿದ್ದಿದ್ದ ಬಸವರಾಜ ಅವರನ್ನು ಬೆಳಗ್ಗೆ ಚನ್ನಮ್ಮನ ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃಪಟ್ಟಿದ್ದಾರೆ.
ಅನೈತಿಕ ಸಂಬಂಧ ಕುರಿತು ಮೊಬೈಲ್ ಸಂಭಾಷಣೆ ಮತ್ತು ಕೆಲ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿವೈರಲ್ ಮಾಡುವುದಾಗಿ ಬಸವರಾಜ ದೊಡಮನಿ ಬೆದರಿಕೆ ಹಾಕಿದ್ದರಿಂದ ಆರೋಪಿಗಳು ಯೋಜನೆ ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


