ಬೆಂಗಳೂರು: ಉದ್ಯಮಿ ಭೀಕರ ಕೊಲೆ ವಿಡಿಯೋ ಸಿಸಿಸಿಟಿವಿಯಲ್ಲಿ ಸೆರೆ
ನಗರದಲ್ಲಿ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ರೌಡಿಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಭಟ್ಟಿ ಅಮ್ಜದ್ ಕೊಲೆಯಾದವರು. ಅಜ್ಜ್ ಫರ್ನಿಚರ್ ಶಾಪ್ ಮಾಲೀಕರಾಗಿದ್ದಾರೆ.

ಬೆಂಗಳೂರು: ನಗರದಲ್ಲಿ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ರೌಡಿಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಭಟ್ಟಿ ಅಮ್ಜದ್ ಕೊಲೆಯಾದವರು. ಅಜ್ಜ್ ಫರ್ನಿಚರ್ ಶಾಪ್ ಮಾಲೀಕರಾಗಿದ್ದಾರೆ.
ಶನಿವಾರ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಭಟ್ಟಿ ಅಮ್ಜದ್ ಕೊಲೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿವೆ. 10 ಜನ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್ ನಡೆದಿದ್ದು, ಮಚ್ಚು ಲಾಂಗ್‍ಗಳಲ್ಲಿ ಮನಸೋ ಇಚ್ಛೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
10 ಜನರಿಂದ ಓರ್ವನ ಮೇಲೆ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಮ್ಜದ್ ನನ್ನ ಕೊಲೆ ಮಾಡಿ ಹಂತಕರು ಬೈಕ್‍ಗಳಲ್ಲಿ ಎಸ್ಕೇಪ್ ಆಗಿದ್ದಾರೆ.
ಅಮ್ಜದ್ 2016 ರಲ್ಲಿ ಇದ್ರೀಸ್ ಎಂಬವನ ಕೊಲೆ ಆರೋಪದಲ್ಲಿ ಅಮ್ಜದ್ ಭಾಗಿಯಾಗಿದ್ದ. ಅಲ್ಲದೇ ಶಿವಾಜಿನಗರ ಮತ್ತೊಬ್ಬ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದನು.
ಹೀಗಾಗಿ ಹಳೆಯ ದ್ವೇಷಕ್ಕೆ ಅಮ್ಜದ್ ಕೊಲೆ ನಡೆದಿದೆ ಎನ್ನಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


