ಮಂಗಳೂರಲ್ಲಿ ಅಮಾನವೀಯ ಕೃತ್ಯ: ಲಾಡ್ಜ್ ನಲ್ಲಿದ್ದ ತಂದೆಯನ್ನು ಕಾಲು ಹಿಡಿದು ಹೊರಕ್ಕೆ ಎಳೆದುಕೊಂಡು ಬಂದ ಮಗ!
ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.
15 ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಬಂದಿದ್ದರಿಂದ ತಂದೆ ಖಾಸಗಿ ಲಾಡ್ಜ್‌ನಲ್ಲಿದ್ದರು. ಅವರಿಗೆ ಲಾಡ್ಜ್‌ಗೆ ತೆರಳುವ ಮುನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ತಂದೆ ಮತ್ತು ಮಗ ಇಬ್ಬರೂ ಉಪ್ಪಳ ಮೂಲದವರು ಮತ್ತು ಮಗನ ಅಮಾನವೀಯ ಕ್ರಿಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಸ್ಥಳೀಯರೂ ಕೂಡ ಈ ಕೃತ್ಯಕ್ಕೆ ತಡೆಯೊಡ್ಡಲಿಲ್ಲ ಎನ್ನುವುದು ಖೇದದ ಸಂಗತಿ.
ಘಟನೆಯ ನಂತರ ಮಗ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ. ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡುವ ಮೂಲಕ ನೊಂದ ತಂದೆಗೆ ಸಹಾಯ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


