ಕಾಡುಪ್ರಾಣಿ ಎಂದು ಗೆಳಯನಿಗೇ ಗುಂಡು ಹಾರಿಸಿದ 'ಕಳ್ಳ ಬೇಟೆಗಾರರು'!
ಬೇಟೆಗೆ ಎಂದು ತೆರಳಿದ್ದ ಯುವಕರ ಗುಂಪು ಕಾಡು ಪ್ರಾಣಿ ಎಂದು ತಿಳಿದು ತಮ್ಮ ಸ್ಮೇಹಿತನಿಗೇ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಾರವಾರ: ಬೇಟೆಗೆ ಎಂದು ತೆರಳಿದ್ದ ಯುವಕರ ಗುಂಪು ಕಾಡು ಪ್ರಾಣಿ ಎಂದು ತಿಳಿದು ತಮ್ಮ ಸ್ಮೇಹಿತನಿಗೇ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಘಟನೆ ನಡೆದಿದ್ದು, ರಾತ್ರಿ ವೇಳೆ ಪ್ರಾಣಿ ಬೇಟೆಗೆಂದು ಐವರು ಗೆಳೆಯರು ಕಾಡಿಗೆ ಹೋಗಿದ್ದಾರೆ. ಈ ವೇಳೆ ಕಾಡು ಪ್ರಾಣಿ ಎಂದು ತಮ್ಮ ತಂಡದಲ್ಲಿದ್ದ ಮುಷ್ತಾಕ್ ಎಂಬ ಗೆಳೆಯನಿಗೇ ಗುಂಡುಹಾರಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಬೇಟೆಗೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಭಾನುವಾರ ರಾತ್ರಿ ಮಳಗಿ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಸೇರಿದಂತೆ ಐವರು ತೆರಳಿದ್ದರು. ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು. ಆಗ ಮುಷ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ. ಈ ವೇಳೆ ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಮುಷ್ತಾಕ್ ಎದೆಯ ಮೇಲ್ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


