ರಾಜ್ಯ

ವಿಜಯಪುರ: ಮೀನು ಹಿಡಿಯಲು ಹೋಗಿದ್ದವರು ಶವವಾಗಿ ಪತ್ತೆ

ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರ ಶವ ಇಂದು ಪತ್ತೆಯಾಗಿದೆ.

ವಿಜಯಪುರ: ಮೀನು ಹಿಡಿಯಲು ಹೋಗಿದ್ದವರು ಶವವಾಗಿ ಪತ್ತೆ
ಸಂಗ್ರಹ ಚಿತ್ರ
Published On :

ವಿಜಯಪುರ: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರ ಶವ ಇಂದು ಪತ್ತೆಯಾಗಿದೆ.

ಪರಶುರಾಮ ಲಮಾಣಿ (36) ಮತ್ತು ರಮೇಶ ಲಮಾಣಿ(38) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ಧನಾಥ ಬಳಿ ಮೂರು ಜನ ಯುವಕರು ಗುರುವಾರ ಮೀನು ಹಿಡಿಯಲು ಬುಟ್ಟಿ(ತೆಪ್ಪ)ಯಲ್ಲಿ ಕೃಷ್ಣಾ ನದಿಗೆ ತೆರಳಿದ್ದರು. ಸಂಜೆ ಭಾರಿ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿದ ಪರಿಣಾಮ ಭಾರಿ ಗಾಳಿಯ ರಭಸಕ್ಕೆ ಇವರು ಮೀನು ಹಿಡಿಯುತ್ತಿದ್ದ ಬುಟ್ಟಿ(ತೆಪ್ಪ) ನದಿಯಲ್ಲಿ ಉರುಳಿ ಬಿತ್ತು.

ಈ ಸಂದರ್ಭದಲ್ಲಿ ಮೂವರ ಪೈಕಿ ಅಕ್ಷಯ್ ಲಮಾಣಿ ಈಜಿ ದಡ ಸೇರಿದ್ದು, ಇಬ್ಬರೂ ನಾಪತ್ತೆಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಕೊಲ್ಹಾರ ತಹಶೀಲ್ದಾರ್ ಎಂ. ಎಸ್. ಬಾಗವಾನ್ ಮತ್ತು ಕೊಲ್ಹಾರ ಪೊಲೀಸರು ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಸತತ ಎರಡು ದಿನಗಳ ಶೋಧ ಕಾರ್ಯದ ಬಳಿಕ ಓರ್ವನ ಶವ ಗಣಿ ಗ್ರಾಮದ ಬಳಿ ಪತ್ತೆಯಾದರೆ, ಮತ್ತೊಬ್ಬನ ಶವ ಸಿದ್ಧನಾಥ ತಾಂಡಾದ ಬಳಿ ಪತ್ತೆಯಾಗಿವೆ.

ಮೃತರ ಶವಗಳನ್ನು ಹೊರ ತೆಗೆಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.