ಶ್ರೀರಂಗಪಟ್ಟಣ: 1200 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಗಾರ್ಮೆಂಟ್ ಕಂಪನಿ
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಗಾರ್ಮೆಂಟ್ ಉದ್ಯಮದ ಮೇಲೆ ತೀವ್ರ ರೀತಿಯ ಹೊಡೆತ ಬಿದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಗಾರ್ಮೆಂಟ್ ಕಂಪನಿಯೊಂದು ತನ್ನ 1200 ಕಾರ್ಮಿಕರನ್ನು ಕೆಲಸದಿಂದಲೇ ತೆಗೆದುಹಾಕಿದೆ.

ಮಂಡ್ಯ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಗಾರ್ಮೆಂಟ್ ಉದ್ಯಮದ ಮೇಲೆ ತೀವ್ರ ರೀತಿಯ ಹೊಡೆತ ಬಿದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಗಾರ್ಮೆಂಟ್ ಕಂಪನಿಯೊಂದು ತನ್ನ 1200 ಕಾರ್ಮಿಕರನ್ನು ಕೆಲಸದಿಂದಲೇ ತೆಗೆದುಹಾಕಿದೆ.
ಆಡಳಿತ ಮಂಡಳಿ ಈ ನಿರ್ಧಾರವನ್ನು ಖಂಡಿಸಿ ನೂರಾರು ಕಾರ್ಮಿಕರು ಟಿಬಿ ರಸ್ತೆಯಲ್ಲಿರುವ ಗೋಕಲದಾಸ್ ಎಕ್ಸ್ ಪೋರ್ಟ್ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮಹಿಳೆ ಪೂರ್ಣಿಮಾ, ಮಾರ್ಚ್ 23ರಿಂದ ಈವರೆಗೂ ಕೇವಲ ಅರ್ಧ ದಿನದ ವೇತನ ನೀಡಲಾಗುತ್ತಿದೆ. ನಾಳೆ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಸಭೆ ಇದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಬೇಕಾಯಿತು ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸ್ವರೂಪ್ ಹೇಳಿದರು.
ಇದು ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್ (25) ಎಂನ್ನು ಉಲ್ಲಂಘಿಸಿದೆ. ಕಾರ್ಮಿಕರಿಗೆ ಅರ್ಧ ವೇತನ ನೀಡಿದರೆ ಕಾರ್ಖಾನೆ ನಡೆಯುತ್ತಿಲ್ಲ ಎಂಬರ್ಥವಾಗುತ್ತದೆ. ಇದು ಕಾರ್ಖಾನೆ ಮುಚ್ಚಲು ಕಾರಣವಾಗಬಹುದು ಎಂದು ಗಾರ್ಮೆಂಟ್ ಅಸೋಸಿಯೇಷನ್ ಟ್ರೇಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಆರ್. ಪ್ರತಿಭಾ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


