ಚಿಕ್ಕೋಡಿ: ತಂದೆ, ಮಗನನ್ನು ಥಳಿಸಿ ಬಾವಿಗೆಸೆದ ಕಳ್ಳರು; ತಂದೆ ಸಾವು, ಮಗ ಗಂಭೀರ ಗಾಯ
ಆರು ಜನ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿ ಬಾವಿಗೆಸೆದ ಪರಿಣಾಮ ತಂದೆ ಸಾವನಪ್ಪಿದ್ದು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡದಲ್ಲಿ ನಡೆದಿದೆ.

ಚಿಕ್ಕೋಡಿ: ಆರು ಜನ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿ ಬಾವಿಗೆಸೆದ ಪರಿಣಾಮ ತಂದೆ ಸಾವನಪ್ಪಿದ್ದು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡದಲ್ಲಿ ನಡೆದಿದೆ.
ಮೃತನನ್ನು ಬೆಂಡವಾಡ ಗ್ರಾಮದ ನಿವಾಸಿ ಮುಕುಂದ ಮೇತ್ರಿ(38) ಎಂದು ಗುರುತಿಸಲಾಗಿದೆ. ಇನ್ನೂ ಆತನ ಮಗ ರಾಘವೇಂದ್ರ ಮೇತ್ರಿ (23) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿಸಿದ್ದಾರೆ.
ಬೆಂಡವಾಡ ಗ್ರಾಮದ ತೋಟದ ಮನೆಗೆ ತಡರಾತ್ರಿ ಆರು ಜನರು ಕಳ್ಳರು ಕಳ್ಳತನಕ್ಕೆ ಯತ್ನಿಸಿದಾಗ ಮನೆಯ ಮಾಲೀಕ ಹಾಗೂ ಆತನ ಮಗ ಕಳ್ಳರನ್ನು ಹಿಡಿಯಲು ಬೆನ್ನತ್ತಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರು ತಂದೆ, ಮಗನನ್ನು ಥಳಿಸಿ ಅಲ್ಲಿಯೇ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಎಸೆದು ಓಡಿ ಹೋಗಿದ್ದರೆ. ಇನ್ನೂ ಹಲ್ಲೆಯಿಂದ ತಂದೆ ಸಾವನ್ನಪ್ಪಿದ್ದು ಮಗನನ್ನು ಗೋಕಾಕ ದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿನೀಡಿ ಪರಿಶೀಲಿನೆ ನಡೆಸಿ ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


