ಅಕ್ರಮ ಬೇಟೆಗಾರರ ಎಡೆಮುರಿ ಕಟ್ಟಲು ಸಿದ್ಧವಾಗಿದೆ ಕಾಲ್ ಭೈರವ ತಂಡ
ರಾಜ್ಯದಲ್ಲಿ ಅಕ್ರಮ ಬೇಟೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಶಿರಸಿ ಅರಣ್ಯ ಇಲಾಖೆಯಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಆರು ಕಾಲ್ ಭೈರವ ತಂಡ ರಚಿಸಲಾಗಿದೆ. ಈ ತಂಡಗಳು ಹಗಲು ರಾತ್ರಿ ಗಸ್ತು ತಿರುಗುತ್ತಿರುತ್ತವೆ.

ಬೆಂಗಳೂರು: ಕೊರೋನಾದಿಂದಾಗಿ ರಾಜ್ಯದ ಅರಣ್ಯ ಗಳಲ್ಲಿ ನಿಷೇಧಿತ ಕಾರ್ಯಚಟುವಟಿಕೆಗಳು ಹೆಚ್ಚಾಗುತ್ತಿವೆ, ಇದರಿಂದ ಅರಣ್ಯ ಇಲಾಖೆ ಸಮಸ್ಯೆಗಳು ಹೆಚ್ಚಾಗಿದೆ.
ರಾಜ್ಯದಲ್ಲಿ ಅಕ್ರಮ ಬೇಟೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಶಿರಸಿ ಅರಣ್ಯ ಇಲಾಖೆಯಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಆರು ಕಾಲ್ ಭೈರವ ತಂಡ ರಚಿಸಲಾಗಿದೆ. ಈ ತಂಡಗಳು ಹಗಲು ರಾತ್ರಿ ಗಸ್ತು ತಿರುಗುತ್ತಿರುತ್ತವೆ.
ಇತ್ತೀಚೆಗೆ ಸಿದ್ದಾಪುರ ಅರಣ್ಯ ವಲಯಾಧಿಕಾರಿಗಳು ವನ್ಯಜೀವಿ ಮಾಂಸವನ್ನು ಸಂಸ್ಕರಿಸಿದ ಕಳ್ಳ ಬೇಟೆಗಾರರನ್ನು ಬಂಧಿಸಿದ್ದರು ಮತ್ತು ಮೀಸಲು ಅರಣ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆದರು.
ಕೆನರಾ ಸರ್ಕಲ್ ನ ಸಿಸಿಎಫ್ ಯತೀಶ್ ಕುಮಾರ್ ರಾತ್ರಿ ಪಾಳಿಯ ಗಸ್ತು ಹೆಚ್ಚಿಸಲು ತಂಡವನ್ನು ಮತ್ತಷ್ಟು ಸದೃಢಗೊಳಿಸಿದ್ದಾರೆ, ಈ ತಂಡ 12 ಗಂಟೆ ಗಸ್ತು ತಿರುಲಿದೆ.
ಪ್ರತಿ ತಂಡದಲ್ಲಿ ಇಬ್ಬರು ಆರ್ ಎಫ್ ಒ ಮತ್ತು ಇಬ್ಬರು ಗಾರ್ಡ್ ಮತ್ತು ಇಬ್ಬರು ವಾಚರ್ ಇರುತ್ತಾರೆ. ಈ ತಂಡ ಜುಲೈ 19 ರಂದು ಬೇಟೆಗಾಗಿ ಹೊಂಚು ಹಾಕುತ್ತಿದ್ದ ಇಬ್ಬರನ್ನು ನಿಡಗೋಡು ಪ್ರದೇಶದ ಅರಸಿಕಟ್ಟೆ ಪ್ರದೇಶದಲ್ಲಿ ಸೆರೆ ಹಿಡಿದಿದ್ದರು.
ಹೊನ್ನೆಹಡ್ಡದ ಚಂದ್ರ ಶೇಖರ್ ನಾಯಕ್ ಮತ್ತು ರಾಮಚಂದ್ರ ನಾಯಕ್ ಅವರನ್ನು ಬಂಧಿಸಿ ಅವರಿಂದ ಗನ್ ಮತ್ತು ಕಾಟ್ರಿಜ್ ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜುಲೈ 24 ರಂದು ಕಾಲ್ ಬೈರವ್ ತಂಡ ಬೊಗಳುವ ಜಿಂಕೆ ಮಾಂಸ ವಶಪಡಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


