ಬೆಳಗಾವಿ: ಸಹೋದರನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಕೊನೆಯುಸಿರೆಳೆದ ಸಹೋದರಿಯರು
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರನೊಬ್ಬ ಮೃತಪಟ್ಟ ಸುದ್ದಿ ಕೇಳಿ ಇಬ್ಬರು ಸಹೋದರಿಯರು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರನೊಬ್ಬ ಮೃತಪಟ್ಟ ಸುದ್ದಿ ಕೇಳಿ ಇಬ್ಬರು ಸಹೋದರಿಯರು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ವಜೀದ್ ಜಮಾದಾರ್ (65) ಎಂಬಾತ ಅನಾರೋಗ್ಯದಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಎರಡು ದಿನಗಳ ಕಾಲ ಬಿಮ್ಸ್ ನಲ್ಲಿ ಚಿಕಿತ್ಸೆಯ ಬಳಿಕ ಆತ ಮೃತಪಟ್ಟಿದ್ದಾನೆ.
ಈ ಸಾವಿನ ಸುದ್ದಿ ಕೇಳಿದ ಹಿರಿಯ ಸಹೋದರಿ ಹುಸೇನ್ ಬಿ (68) ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ವಸೀದ ಜಮಾದಾರ್ (65), ಹಿರಿಯ ಸಹೋದರಿ ಹುಸೇನ್ ಬಿ (68) ಮೃತಪಟ್ಟ ಸುದ್ದಿಯನ್ನು ಕಾಕತಿ ಗ್ರಾಮದಲ್ಲಿ ಇರೋ ಮತ್ತೊಬ್ಬ ಸಹೋದರಿಗೆ ವಿಷಯ ತಿಳಿಸಲಾಗಿದೆ. ಈ ವಿಷಯ ಕೇಳಿ ಸಾರಾ ಸನದಿ (66) ಎಂಬ ಮಹಿಳೆ ಸಹ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಪರೀಕ್ಷೆ ಒಳಪಡಿಸಿದಾಗ ಆಕೆಯೂ ಮೃತಪಟ್ಟಿರುವುದು ಗೊತ್ತಾಗಿದೆ.
ಒಡ ಹುಟ್ಟಿದ ಮೂರು ಜೀವಗಳು ಸಾವಿನಲ್ಲೂ ಒಂದಾಗಿವೆ. ಈ ಒಡಹುಟ್ಟಿದವರ ಹಠಾತ್ ಸಾವಿಗೆ ಪಂತ ಬಾಳೇಕುಂದ್ರಿ ಗ್ರಾಮಸ್ಥರು ಮಮ್ಮಲ ಮರುಗಿದ್ದು, ಮೂವರ ಅಂತ್ಯಕ್ರಿಯೆಯನ್ನು ಏಕಕಾಲದಲ್ಲಿ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


