ರಾಜ್ಯ

ಕೊರೋನಾ ಕವಚ: ವಿಮಾ ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

ವಿಮೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಬಾರದು ಮತ್ತು ವಿಮೆ ಸೌಲಭ್ಯದಿಂದ ರೋಗಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಕೋವಿಡ್-19 ಚಿಕಿತ್ಸೆಗೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳ ಪಟ್ಟಿಯನ್ನು ಪಾಲಿಕೆ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.

ಕೊರೋನಾ ಕವಚ: ವಿಮಾ ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ವಿಮೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಬಾರದು ಮತ್ತು ವಿಮೆ ಸೌಲಭ್ಯದಿಂದ ರೋಗಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೋವಿಡ್-19 ಚಿಕಿತ್ಸೆಗೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳ ಪಟ್ಟಿಯನ್ನು ಪಾಲಿಕೆ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ರೋಗಿಗಳಿಗೆ ಎಷ್ಟು ವಿಮಾ ಹಣ ಸಿಗುತ್ತದೆ ಮತ್ತು ಎಷ್ಟು ಸಮಯಗಳೊಳಗೆ ಬಿಡುಗಡೆ ಮಾಡಬೇಕೆಂದು ಸಹ ಇದೆ. ಪಟ್ಟಿಯಲ್ಲಿ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸಂಸ್ಥೆಗಳಾದ ಎಸ್ ಬಿಐ, ಅಕೊ, ಆದಿತ್ಯ ಬಿರ್ಲಾ, ಬಜಾಜ್ ಅಲಯನ್ಸ್, ಭಾರ್ತಿ ಎಎಕ್ಸ್ ಎ, ಕೊಲಮನಡಲಮ್ ಎಂಎಸ್, ಎಡೆಲ್ ವೈಸ್ಸ್, ಫ್ಯೂಚರ್, ಗೊ ಡಿಜಿಟ್, ಹೆಚ್ ಡಿಎಫ್ ಸಿ ಎರ್ಗೊ, ಐಸಿಐಸಿಐ ಲೊಂಬಾರ್ಡ್, ಐಎಫ್ಎಫ್ ಸಿಒ,ಟೊಕಿಯೊ, ಕೊಟಾಕ್ ಮಹೀಂದ್ರ, ಲಿಬರ್ಟಿ, ಮಗ್ಮಾ ಹೆಚ್ ಡಿಐ, ಮಣಿಪಾಲ್ ಸಿಗ್ನಾ, ಮ್ಯಾಕ್ಸ್ ಬೂಪಾ, ನವಿ, ರಹೇಜಾ ಕ್ಯುಬಿಇ, ರಿಲಯನ್ಸ್, ರೆಲಿಗರೆ, ರಾಯಲ್ ಸುಂದರಮ್, ಸ್ಟಾರ್ ಹೆಲ್ತ್ ಅಂಡ್ ಅಲ್ಲೈಡ್, ಟಾಟಾ ಎಐಜಿ, ನ್ಯೂ ಇಂಡಿಯಾ ಅಶ್ಯೂರೆನ್ಸ್, ದ ಓರಿಯೆಂಟಲ್, ಯುನೈಟೆಡ್ ಇಂಡಿಯಾ, ಯೂನಿವರ್ಸಲ್ ಸೊಂಪೊ ಕಂಪೆನಿಗಳಿವೆ.

ಕೊರೋನಾ ಕವಚದಡಿ ನಾಗರಿಕರಿಗೆ 50 ಸಾವಿರದಿಂದ 5 ಲಕ್ಷಗಳವರೆಗೆ ವಿಮಾ ಹಣ ಚಿಕಿತ್ಸೆಗೆ ಸಿಗಲಿದ್ದು ಮೂರೂವರೆ ತಿಂಗಳಿನಿಂದ ಒಂಭತ್ತೂವರೆ ತಿಂಗಳವರೆಗೆ ಪಾಲಿಸಿ ಅವಧಿಯಿರುತ್ತದೆ. 18ರಿಂದ 65 ವರ್ಷದೊಳಗಿನವರು ಪಾಲಿಸಿ ಹಣವನ್ನು ಪಡೆಯಲು ಅರ್ಹರಾಗಿದ್ದು ಅವರ ಅವಲಂಬಿತರಿಗೂ ಸಹ ಸಿಗುತ್ತದೆ. ಕೋವಿಡ್-19ನಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರಿಗೆ ಈ ವಿಮೆ ಸೌಲಭ್ಯ ದೊರಕುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.