ಕರ್ನಾಟಕ-ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ!
ಕೋವಿಡ್ -19 ಲಾಕ್‍ಡೌನ್ ನಿರ್ಬಂಧಗಳು ಅನೇಕ ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.ಅಂತಹದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಕರ್ನಾಟಕ –ಕೇರಳ ಗಡಿಯಲ್ಲಿನ ಚೆಕ್ ಪೋಸ್ಟ್ ಬುಧವಾರ ಮದುವೆಯೊಂದಕ್ಕೆ ವೇದಿಕೆಯಾಗಿತ್ತು.

ಚಾಮರಾಜನಗರ: ಕೋವಿಡ್ -19 ಲಾಕ್‍ಡೌನ್ ನಿರ್ಬಂಧಗಳು ಅನೇಕ ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.
ಅಂತಹದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಕರ್ನಾಟಕ –ಕೇರಳ ಗಡಿಯಲ್ಲಿನ ಚೆಕ್ ಪೋಸ್ಟ್ ಬುಧವಾರ ಮದುವೆಯೊಂದಕ್ಕೆ ವೇದಿಕೆಯಾಗಿತ್ತು.
ಕೇರಳದ ವರ ಮತ್ತು ಕರ್ನಾಟಕದ ವಧು ಚೆಕ್ ಪೋಸ್ಟ್ ನಲ್ಲೇ ವಿವಾಹವಾದರು. ಅಂದಹಾಗೆ, ಕ್ವಾರಂಟೈನ್ ತೊಂದರೆಗಳಿಂದ ತಪ್ಪಿಸಿಕೊಳ್ಳಲು ವಧು-ವರರು ತಮ್ಮ ಮದುವೆಗೆ ವಿನೂತನ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು.
'ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ' ಎಂಬ ಮಾತಿದೆ. ಆದರೆ ಈ ಮದುವೆ ಗಡಿ ಚೆಕ್‍ಪೋಸ್ಟ್ ನಲ್ಲಿ ನಡೆದುಹೋಗಿದೆ. ಇವರಿಬ್ಬರು ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೊವಿಡ್ ನಿರ್ಬಂಧಗಳಿಂದ ತೊಂದರೆಯಾಗದಂತೆ ಗಡಿ ಚೆಕ್‌ಪೋಸ್ಟ್‌ನಲ್ಲೇ ತಾಳಿ ಕಟ್ಟಲು ನಿರ್ಧರಿಸಿದ್ದರು. ಇಬ್ಬರಲ್ಲಿ ಯಾರೊಬ್ಬರೂ ಗಡಿಯನ್ನು ದಾಟಿ ಪಕ್ಕದ ರಾಜ್ಯ ಪ್ರವೇಶಿಸಿದರೆ ಕ್ವಾರಂಟೈನ್‍ನಲ್ಲಿ ಇರಬೇಕಾಗಿತ್ತು. ಮದುವೆಗೆ ಎರಡೂ ಕಡೆಯ ಬೆರಳೆಣಿಕೆಯಷ್ಟು ಕುಟುಂಬ ಸದಸ್ಯರು ಮಾತ್ರ ಹಾಜರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


