ರಾಜ್ಯ

ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದವನ ಬಂಧನ: 9 ಯುವತಿಯರ ರಕ್ಷಣೆ

ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದವನ ಬಂಧನ: 9 ಯುವತಿಯರ ರಕ್ಷಣೆ
ಬಂಧಿತ ಆರೋಪಿ ಬಸವರಾಜು ಶಂಕರಪ್ಪ ಕಳಸದ್
Published On :

ಬೆಂಗಳೂರು:  ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಸವರಾಜು ಶಂಕರಪ್ಪ ಕಳಸದ್ ಬಂಧಿತ ಆರೋಪಿ.

ಬಂಧಿತ ಕೆಲಸದ ಆಮಿಷದ ನೆಪವೊಡ್ಡಿ, ನಂಬಿಸಿ ಅನ್ಯರಾಜ್ಯಗಳ ಯುವತಿಯರನ್ನು ಕರೆತಂದು ನಂತರ ಯುವತಿಯರನ್ನು ಡಾನ್ಸ್ ಬಾರ್​ಗಳಿಗೆ ಸರಬರಾಜು ಮಾಡುತ್ತಿದ್ದನು.‌ ಯುಎಇ, ಫ್ಯುಜಾರಿಯಾಗಳಿಗೆ ಅಕ್ರಮ ಸಾಗಾಣಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆರೋಪಿ ಬಸವರಾಜು ತಾನು ಪರಭಾಷೆಗಳ ಚಲನಚಿತ್ರಗಳಲ್ಲಿ ಸೈಡ್ ಆ್ಯಕ್ಟಿಂಗ್, ಪ್ರೊಡೆಕ್ಷನ್, ಕ್ಯಾಮರಾ ಕೆಲಸ ನಿರ್ವಹಿಸಿದ್ದನೆನ್ನಲಾಗಿದೆ. ಪ್ರಸಿದ್ದ ನಾಯಕ ನಟರ ಜತೆಗೆ ಫೋಟೋ ತೆಗೆಸಿಕೊಳ್ಳುವ ಚಾಳಿ ಈತನಿಗಿದ್ದು ಅದೇ ಫೋಟೋಗಳನ್ನು ಯುವತಿಯರು, ಮಹಿಳೆಯರಿಗೆ ತೋರಿಸಿ ವಂಚನೆಯ ಬಲೆಗೆ ಬೀಳಿಸಿದ್ದ. 

ಇದೀಗ ಆರೋಪಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.