ಸಮುದಾಯಕ್ಕೆ ಹಬ್ಬಿದ ಕೊರೋನಾ? ರಾಜ್ಯದ ಶೇ. 69.8 ಕೋವಿಡ್ ಪ್ರಕರಣಗಳಿಗೆ ಸಂಪರ್ಕ, ಪ್ರಯಾಣ ಇತಿಹಾಸವೇ ಇಲ್ಲ!
ರಾಜ್ಯದಲ್ಲಿ ಇಂದಿನವರೆಗಿನ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿದ್ದು ಕರ್ನಾಟಕದಲ್ಲಿ ಒಂದೇ ದಿನ 1,925 ಕೋವಿಡ್-ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಬೆಂಗಳುರು: ರಾಜ್ಯದಲ್ಲಿ ಇಂದಿನವರೆಗಿನ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿದ್ದು ಕರ್ನಾಟಕದಲ್ಲಿ ಒಂದೇ ದಿನ 1,925 ಕೋವಿಡ್-ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಲ್ಲಿ 69.8% (1,345 ಪ್ರಕರಣಗಳು) ಯಾವುದೇ ಸಂಪರ್ಕ ಅಥವಾ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎನ್ನುವುದು ಆತಂಕಕಾರಿ ವಿಚಾರ. ರಾಜ್ಯದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 23,474ಕ್ಕೆ ತಲುಪಿದ್ದರೆ ನಿನ್ನೆ ಒಂದೇ ದಿನ ರಾಜಧಾನಿ ಬೆಂಗಳೂರಿನಲ್ಲಿ 1,235 ಹೊಸ ಪ್ರಕರಣಗಳು ವರದಿಯಾಗಿತ್ತು.
ಈ ಪೈಕಿ ಕೇವಲ 19 ಮಾತ್ರ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಐಎಲ್ ಐ ಗುಣಲಕ್ಷಣಗಳನ್ನು ಹೊಂದಿದೆ. ಉಳಿದ ಯಾವ ಪ್ರಕರಣಕ್ಕೂ ಪ್ರಯಾಣದ ಇತಿಹಾಸವಿಲ್ಲ. ನಿನ್ನೆ 37 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದರೆ ಒಟ್ಟಾರೆ , 372 ಮಂದಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಪೈಕಿ ಭಾನುವಾರ ಬೆಂಗಳುರಿನಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 145 ಕ್ಕೆ ಏರಿದೆ.
ಇವುಗಳಲ್ಲಿ ಕನಿಷ್ಠ 135 ಪ್ರಕರಣಗಳು ಐಎಲ್‌ಐ, 32 ಸಾರಿ, 238 ಪ್ರಾಥಮಿಕ ಸಂಪರ್ಕಗಳು, 53 ಇತರ ರಾಜ್ಯಗಳಿಂದ ಹಿಂದಿರುಗಿದವರು, 11 ಅಂತರರಾಷ್ಟ್ರೀಯ ಪ್ರಯಾಣಿಕರು, ಮತ್ತು ನಾಲ್ಕು ಪ್ರಕರಣಗಳು ಕಂಟೈನ್ಮೆಂಟ್ ವಲಯಗಳಿಂದ ಬಂದವು. ಬೆಂಗಳೂರು ಹೊರತು ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 147 ಪ್ರಕರಣಗಳು ವರದಿಯಾಗಿದ್ದು ಬಳ್ಳಾರಿಯಲ್ಲಿ 90, ವಿಜಯಪುರ 51, ಕಲಬುರಗಿ 49 ಮತ್ತು ಉಡುಪಿ, ಧಾರವಾಡಗಳಲ್ಲಿ 45 ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


