ಮಹದೇಶ್ವರ ಬೆಟ್ಟ ನೌಕರನ ಕೊಲೆ ಪ್ರಕರಣ: ಪತ್ನಿಯ ಹಳೇ ಪ್ರೇಮ ಪುರಾಣವೇ ಕಾರಣ!
ಜೂ.25 ರಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಕೊಲೆಯಾಗಿದ್ದ ಪ್ರಾಧಿಕಾರದ ನೌಕರನ ಕೊಲೆ ಪ್ರಕರಣಕ್ಕೆ ಪತ್ನಿಯ ಹಳೇ ಪ್ರೇಮಕಥೆಯೇ ಕಾರಣ ಎಂದು ತಿಳಿದುಬಂದಿದೆ.

ಚಾಮರಾಜನಗರ: ಜೂ.25 ರಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಕೊಲೆಯಾಗಿದ್ದ ಪ್ರಾಧಿಕಾರದ ನೌಕರನ ಕೊಲೆ ಪ್ರಕರಣಕ್ಕೆ ಪತ್ನಿಯ ಹಳೇ ಪ್ರೇಮಕಥೆಯೇ ಕಾರಣ ಎಂದು ತಿಳಿದುಬಂದಿದೆ.
ಈ ಕುರಿತು ಪತ್ರಿಕೆಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಮೃತ ಮಹಾದೇವ ಪ್ರಸಾದ್ನ ಪತ್ನಿ ಅನಿತಾ ಎಂಬಾಕೆ ಮದುವೆಗೆ ಮುನ್ನ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಯುವಕನೋರ್ವನೊಂದಿಗೆ ಇರಿಸಿಕೊಂಡಿದ್ದ ಪ್ರೇಮವನ್ನು ಮುಂದುವರೆಸಿದ್ದು ಪತಿಯ ಸಾವಿಗೆ ಕಾರಣವಾಗಿದೆ.
ಏನಿದು ಪ್ರಕರಣ:
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾವೇರಿ ಪಂಪ್ ಹೌಸ್ನಲ್ಲಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಾದೇವಪ್ರಸಾದ್ ನಂಜನಗೂಡು ತಾಲೂಕಿನ ತೆಳ್ಳೂರು ಗ್ರಾಮದ ಅನಿತಾ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದರು. ಆದರೆ, ಅನಿತಾ ಅದಾಗಲೇ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಬಸವಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ವಿವಾಹದ ಬಳಿಕವೂ ಮುಂದುವರೆದಿದ್ದ ಇವರ ಪ್ರೇಮಪುರಾಣ ಪತಿ ಮಹಾದೇವಪ್ರಸಾದ್ಗೆ ತಿಳಿದಿದ್ದರಿಂದ ಕಸಿವಿಸಿಗೊಂಡ ಅನಿತಾ ಪತಿಯನ್ನು ಹತ್ಯೆ ಮಾಡಿ ಬಸವಣ್ಣನೊಂದಿಗೆ ಜೀವನ ಸಾಗಿಸಲು ನಿಶ್ಚಯಿಸಿದ್ದಳು. ಪತಿಯನ್ನು ತನ್ನೂರಿಗೆ ಬರುವಂತೆ ಹೇಳಿ ಮಹದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಮಾಡಿದ ಪ್ರಿಯಕರ ಬಸವಣ್ಣನಿಗೆ ಶರತ್ ಎಂಬಾತನೂ, ಸಾಥ್ ನೀಡಿರುವುದಾಗಿ ತಿಳಿದುಬಂದಿದೆ. ಅನಿತಾಳನ್ನು ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ವರದಿ: ಗುಳಿಪುರ ನಂದೀಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


