ವಿಡಿಯೋ ಕಾಲ್ ನಲ್ಲಿ ಸಲಹೆ ಪಡೆದು ಅಂಗಡಿಯಲ್ಲಿ ಕಳವು: ಓರ್ವನ ಬಂಧನ
ವಿಭಿನ್ನವಾಗಿ ವಿಡಿಯೋ ಕಾಲ್ ನಲ್ಲಿ ಸಲಹೆ ಪಡೆದು ಅಂಗಡಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ವಿಭಿನ್ನವಾಗಿ ವಿಡಿಯೋ ಕಾಲ್ ನಲ್ಲಿ ಸಲಹೆ ಪಡೆದು ಅಂಗಡಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
23ವರ್ಷ ಪ್ರಾಯದ ನಾಗವಾರ ನಿವಾಸಿ ಸೈಯದ್ ಮುಹಮ್ಮದ್ ಫೈಸಲ್ ಬಂಧಿತ ಆರೋಪಿ.
ಈತ ನಗರದ ಹಲವೆಡೆ ವಿಡಿಯೋ ಕಾಲ್ ನಲ್ಲಿ ಅಂಗಡಿಯ ಬೀಗ ಹೇಗೆ ಮುರಿಯುವುದರ ಬಗ್ಗೆ ತನ್ನ ಸ್ನೇಹಿತನ ಸಲಹೆ ಪಡೆದು ಅಂಗಡಿ ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಅಶೋಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಆರೋಪಿ ಬಂಧನದಿಂದಾಗಿ ಒಂಬತ್ತು ಪ್ರಕರಣಗಳು ಪತ್ತೆಯಾಗಿದ್ದು, ಒಂದು ಲಕ್ಷ ಮೌಲ್ಯದ ವಾಚ್ ಸಿಕ್ಕಿವೆ. ಅಲ್ಲದೆ ಕೃತ್ಯದಲ್ಲಿ ಭಾಗವಹಿಸಿರುವ ಇನ್ನೋರ್ವ್ ಆರೋಪಿ ವಿಕ್ರಮ್‍ಗಾಗಿ ಶೋಧ ಮುಂದುವರಿದಿದೆ ಎಂದು ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


