ನಿಪ್ಪಾಣಿ: ಪೊಲೀಸರಿಗೆ ತಲೆಬೇನೆಯಾಗಿದ್ದ ಕಳ್ಳನ ಬಂಧನ, 1.78 ಕೋಟಿ ರೂ ಮಾಲುಗಳ ವಶ
ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳನನ್ನು ಬಂಧಿಸಿ ಆತನಿಂದ ೧.೭೮ ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ವಶೊಡಿಸಿಕೊಂಡ ಘಟನೆ ನಿಪ್ಪಾಣಿ ಯಲ್ಲಿ ನಡೆದಿದೆ.

ನಿಪ್ಪಾಣಿ;: ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳನನ್ನು ಬಂಧಿಸಿ ಆತನಿಂದ ೧.೭೮ ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ವಶೊಡಿಸಿಕೊಂಡ ಘಟನೆ ನಿಪ್ಪಾಣಿ ಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಇಂದಿರಾ ನಗರ ನಿವಾಸಿ ಕಲ್ಲಪ್ಪ ಸುನೀಲ ಕದಮ (24) ಬಂಧಿತ ಆರೋಪಿಯಾಗಿದ್ದಾನೆ
ಆರೋಪಿಯಿಂದ ಎರಡು ಕಾರು ಒಂಭತ್ತು ಟಿಪ್ಪರ ಸೇರಿ ೧೩ ವಾಹನಗಳನ್ನು ಹಾಗೂ ವೆಲ್ಡಿಂಗ್ ಮತ್ತು ಪೇಂಟಿಂಗ್ ಮಶೀನ ವಶಪಡಿಸಿಕೊಂಡಿದ್ದು ಇವುಗಳ ಮೌಲ್ಯ ೧.೭೮ ಕೋಟಿಯಷ್ಟಾಗಿದೆ.
ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳತನ
ಬೆಳಗಾವಿ ಎಎಸ್.ಪಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿಎಸ್ಪಿ ಮನೋಜ ಕುಮಾರ ನಾಯಕ್ ನೇತೃತ್ವದ ತಂಡದಲ್ಲಿ ನಿಪ್ಪಾಣಿ ಸಿ.ಪಿ.ಐ ಎಸ್.ಡಿ.ಸತ್ಯನಾಯಿಕ,ಪಿ.ಎಸ್.ಐ ಕುಮಾರ ಹಾಡಕರ ತಂಡ ರಚಿಸಿ ಕಳ್ಳನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಜಿಲ್ಲೆಯ ಹಿಂಡಲಗಾ ಕಾರ್ಯಾಗ್ರಹಕ್ಕೆ ರವಾನಿಸಲಾಗಿದ್ದು ಈ ಕುರಿತು ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


