ರಾಜ್ಯ

'ಜೋಶಿ' ನಿವಾಸದಲ್ಲಿ ಮೆಚ್ಚಿನ ಒಗ್ಗರಣೆ ಅವಲಕ್ಕಿ, ತುಪ್ಪದ ದೋಸೆ ಸವಿದ ' ಅಮಿತ್ ಶಾ'

ರಾಜ್ಯದಲ್ಲಿ ಪ್ರವಾಸ ಮುಗಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿದರು.

'ಜೋಶಿ' ನಿವಾಸದಲ್ಲಿ ಮೆಚ್ಚಿನ ಒಗ್ಗರಣೆ ಅವಲಕ್ಕಿ, ತುಪ್ಪದ ದೋಸೆ ಸವಿದ ' ಅಮಿತ್ ಶಾ'
ಜೋಶಿ ಕುಟುಂಬಸ್ಥರೊಂದಿಗೆ ಅಮಿತ್ ಶಾ
Published On :

ಬೆಂಗಳೂರು: ರಾಜ್ಯದಲ್ಲಿ ಪ್ರವಾಸ ಮುಗಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿದರು.

ಭಾನುವಾರ ಬೆಳಗ್ಗೆ ಎಂದಿನಂತೆ ಯೋಗ ಮುಗಿಸಿದ ಶಾ, ಪ್ರಹ್ಲಾದ್ ಜೋಶಿ ಮನೆಯಲ್ಲಿ ಒಗ್ಗರಣೆ ಅವಲಕ್ಕಿ, ಗರಿಗರಿ ತುಪ್ಪದ ದೋಸೆ  ಸವಿದರು. 

ಜೋಶಿ ಪತ್ನಿ ಜ್ಯೋತಿ ಜೋಶಿ ಅಮಿತ್ ಶಾ ಅವರನ್ನು ಆರತಿ ಎತ್ತಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಚಿವ ಸೋಮಣ್ಣ, ಬಸವರಾಜ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ಜೋಶಿ ಮನೆಗೆ ಭೇಟಿ ನೀಡಿದ್ದ ಶಾ, ತಮ್ಮ ಮೆಚ್ಚಿನ ಕಾಫಿ ಸೇವಿಸಿ ಬೆಳಗ್ಗೆ 9.20ಕ್ಕೆ ಮನೆಯಿಂದ ತೆರಳಿದರು.

ಅಮಿತ್ ಶಾ ತಮ್ಮ ಕುಟುಂಬದ ಎಲ್ಲರೊಟ್ಟಿಗೂ ಮಾತನಾಡಿದರು,  ಜೊತೆಗೆ ಎಲ್ಲರನ್ನು ವಿಚಾರಿಸಿದರು, ಶಾ ಅವರಿಗಾಗಿ, ಅವಲಕ್ಕಿ, ದೋಸೆ, ಇಡ್ಲಿ, ಉಪ್ಪಿಟ್ಟು ಮಾಡಲಾಗಿತ್ತು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಅಮಿತ್ ಶಾ ಆಗಮನಕ್ಕೆ ಒಂದು ದಿನದ ಮುಂಚೆ ಜೋಶಿ ಮನೆಯಲ್ಲಿ ಉಪಹಾರಕ್ಕೆ ನಿರ್ಧರಿಸಲಾಯಿತು. ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದು ಮನೆಯವರಿಗೆ ಸಂತೋಷ ತಂದಿದೆ. ಅಮಿತ್ ಶಾ ಅವರು ಜೋಶಿ ಅವರ ಮನೆಗೆ ಆಗಮಿಸುವ ಮುನ್ನವ್ ಅವರ ಝೆಡ್ ಪ್ಲಸ್ ಕೆಟಗರಿಯ ಭದ್ರತಾ ಸಿಬ್ಬಂದಿ, ಅಡುಗೆ ಮನೆಗೆ ಆಗಮಿಸಿ ಅಲ್ಲಿನ ಸ್ವಚ್ಚತೆ ಪರಿಶೀಲಿಸಿ ಹಾಕಿರುವ ಸಾಮಾಗ್ರಿ ಪರೀಕ್ಷಿಸಿ, ನಂತರ ಉಪಹಾರವನ್ನು ಅಮಿತ್ ಶಾಗೆ ನೀಡಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.