ಫ್ರೀ ಕಾಶ್ಮೀರ ನಾಮಫಲಕ: ನಳಿನಿ ಪರ ವಾದ ಮಂಡಿಸುವಂತೆ ವಕೀಲ ಸಂಘಕ್ಕೆ ಪ್ರಗತಿಪರ ಸಂಘಗಳ ಮನವಿ
ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ನಡೆದ ಪ್ರಿತಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ವಾದ ಮಂಡಿಸುವಂತೆ ವಕೀಲ ಸಂಘಕ್ಕೆ ಮೈಸೂರು ನಗರ ಆಧಾರಿತ ಪ್ರಗತಿಪರ ಸಂಸ್ಥೆಗಳು ಮನವಿ ಮಾಡಿಕೊಂಡಿವೆ.

ಮೈಸೂರು: ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ನಡೆದ ಪ್ರಿತಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ವಾದ ಮಂಡಿಸುವಂತೆ ವಕೀಲ ಸಂಘಕ್ಕೆ ಮೈಸೂರು ನಗರ ಆಧಾರಿತ ಪ್ರಗತಿಪರ ಸಂಸ್ಥೆಗಳು ಮನವಿ ಮಾಡಿಕೊಂಡಿವೆ.
ನಳಿನಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಈಗಾಗಲೇ ಅವರಿಗೆ ಜಾಮೀನು ಕೂಡ ದೊರಕಿದೆ. ಸಿಆರ್'ಪಿಸಿ ಮತ್ತು ಸಂವಿಧಾನವು ಪ್ರತಿಯೊಬ್ಬರೂ ತಮ್ಮ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಲು ವಕೀಲರನ್ನು ಹೊಂದುವ ಹಕ್ಕನ್ನು ನೀಡುತ್ತದೆ. ನಳಿನಿಗೂ ಆ ಹಕ್ಕು ಹೊತ್ತುವ ಹಕ್ಕಿದೆ ಎಂದು ಪ್ರಗತಿಪರ ಸಂಸ್ಥೆಗಳು ತಿಳಿಸಿವೆ.
ನಳಿನಿಯವರಿಗೆ ಕ್ರಿಮಿನಲ್ ಪಟ್ಟ ಕಟ್ಟಿರುವ ಹಿನ್ನೆಲೆಯಲ್ಲಿ ಚಿಂತಕರಾದ ಪ. ಮಲ್ಲೇಶ್, ಪ್ರೊ.ಮಹೇಶ್ ಚಂದ್ರಗುರು, ಪ್ರೊ ಶಬೀರ್ ಮೊಹ್ದ್ ಮುಸ್ತಾಫಾ, ಕೆಎಸ್. ಶಿವರಾಮ್ ಮತ್ತು ಇತರರು ವಿಷಾದ ವ್ಯಕ್ತಪಡಿಸಿದ್ದಾರೆ.
ನಳಿನಿ ಎಂಬ ದಲಿತ ಮಹಿಳೆ ವಿರುದ್ಧ ದೇಶದ್ರೋಹ ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ. ಹೀಗಾಗಿ ಅವರಿಗೆ ಕಾನೂನು ಬೆಂಬಲದ ಅವಶ್ಯಕತೆಯಿದೆ. ಹೀಗಾಗಿ ಅವರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


