ಗಂಗಾವತಿ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ
ಪಹಣಿಯ 9ನೇ ಕಲಂನಲ್ಲಿ ತಿದ್ದುಪಡಿ ಮಾಡಲು ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕರೊಬ್ಬರು ಹಣದ ಸಮೇತ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ಗಂಗಾವತಿ: ಪಹಣಿಯ 9ನೇ ಕಲಂನಲ್ಲಿ ತಿದ್ದುಪಡಿ ಮಾಡಲು ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕರೊಬ್ಬರು ಹಣದ ಸಮೇತ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ನಗರದ ಮಿನಿವಿಧಾನಸೌಧಲ್ಲಿ ರೈತ ಎಂಕೆ.ಖಾನ್ ಎಂಬುವವರಿಂದ ಆರು ಸಾವಿರ ರೂಪಾಯಿ ಲಂಚ ಪಡೆಯುವಾಗ ವೆಂಕಟಗಿರಿಯ ಕಂದಾಯ ನಿರೀಕ್ಷಕ ವಿಜಯಕುಮಾರ ಎಂಬುವವರು ಎಸಿಬಿ ಟ್ರಾಪ್ ಆಗಿದ್ದಾರೆ.
ಬಸವಪಟ್ಟಣ ಗ್ರಾಮದ ಸರ್ವೇ ನಂಬರ್ 76/6 ರಲ್ಲಿರುವ ರೈತನ ಪಹಣಿಯ 9ನೇ ಕಲಂನಲ್ಲಿ ಮೋಹಿನ್ ಪಾಷಾ ತಂದೆ ಮೈನುದ್ದೀನ್ ಪಾಷಾ ಎಂದು ಇರಬೇಕಿತ್ತು. ಆದರೆ ಮೋಹನ್ ಪಾಷಾ ತಂದೆ ಮೋಹನದ್ದೀನ್ ಎಂದಾಗಿದೆ. ಕಾನೂನು ಬದ್ಧವಾಗಿ ಬದಲಿಸಿಕೊಡುವಂತೆ ರೈತ ಕೇಳಿದ್ದಕ್ಕೆ ಅಧಿಕಾರಿ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಮುಂಗಡ ಆರು ಸಾವಿರ ರೂಪಾಯಿ ಕೊಡುವಾಗ ಬಲೆಬೀಸಿದ ಎಸಿಬಿ ಅಧಿಕಾರಿಗಳು ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಎಸಿಬಿ ಪ್ರಭಾರಿ ಡಿವೈಎಸ್ಪಿ ಚಂದ್ರಕಾಂತ್ ಪೂಜಾರಿ ನೇತೃತ್ವದಲ್ಲಿ ದಾಳಿ ಮಾಡಿದರು. ಪಿಐಗಳಾದ ಬೀಳಗಿ ಸಿದ್ದಪ್ಪ, ಗುರುನಾಥ ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


