ಆನೆಗೊಂದಿ ಉತ್ಸವ: ಪಾರಂಪರಿಕ ನಡಿಗೆಗೆ ಡಿಸಿ, ಶಾಸಕ ಚಾಲನೆ
ಆನೆಗೊಂದಿ ಉತ್ಸವದ ಭಾಗವಾಗಿ ಭಾನುವಾರ ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಗಂಗಾವತಿ: ಆನೆಗೊಂದಿ ಉತ್ಸವದ ಭಾಗವಾಗಿ ಭಾನುವಾರ ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಬಳ್ಳಾರಿಯ ನೋಪಾಸನ ಸಂಸ್ಥೆ ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಣಾಪುರ, ಆನೆಗೊಂದಿ, ಮಲ್ಲಾಪುರ ಗ್ರಾಮದ ಸಕರ್ಾರಿ ಶಾಲೆಯ ಮಕ್ಕಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಂಜನಾದ್ರಿ ಬೆಟ್ಟದಿಂದ ಆರಂಭಿಸಲಾದ ನಡಿಗೆ ಪಂಪಾಸರೋವರ, ಗವಿರಂಗನಾಥ ದೇಗುಲ, ದುಗರ್ಾದೇವಸ್ಥಾನ, ಅಗಸಿ, ರಂಗನಾಥ ದೇಗುಲ, ಗಗನ ಮಹಲ್, ಜೈನಬಸಿದಿ, ಚಿಂತಾಮಣಿ, ತುಂಗಭದ್ರಾ ನದಿ ದಂಡೆ ಮೂಲಕ ಸಾಗಿ ವೇದಿಕೆಯ ಮುಂಭಾಗದಲ್ಲಿ ಸಮಾರೋಪ ಮಾಡಲಾಯಿತು. ಒಟ್ಟು ಐದು ಕಿ.ಲೋ ನಡಿಗೆ ಆಯೋಜಿಸಲಾಗಿತ್ತು.
ವಿಜಯನಗರ ಕಾಲದ ಅಡುಗೆ ಸ್ಪರ್ಧೆಗೆ ಹೊಲೆ ಹೊತ್ತಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿ
ಆನೆಗೊಂದಿಬುತ್ಸವದ ಭಾಗವಾಗಿ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ವಿಜಯನಗರ ಕಾಲದ ಪಾರಂಪರಿಕಾ ಅಡುಗೆ ಹಾಗೂ ಅಧುನಿಕ ಅಡುಗೆ ಸ್ಪರ್ಧೆ ಭಾನುವಾರ ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್ ಹೊಲೆ ಹೊತ್ತಿಸುವ ಮೂಲಕ ಅಡುಗೆ ಸ್ಪರ್ಧೆ ಗೆ ಚಾಲನೆ ನೀಡಿದರು. ಒಟ್ಟು 72 ಜನ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಪಾಲ್ಗೊಂಡಿದ್ದರು. ಈ ಪೈಕು ಹತ್ತು ತಂಡ ವಿಜಯನಗರ ಕಾಲದ ಅಡುಗೆ ಹಾಗೂ 22 ಜನ ಸ್ಥಳಿಯ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ನಾರಾಯಣ ಕನಕರಡ್ಡೆ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಅಡುಗೆ ಸ್ಪರ್ಧೆಗೆ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


