ಪುನೀತ್ ರಾಜ್ ಕುಮಾರ್ ರಿಂದ ಪೊಲೀಸರಿಗೆ ಜುಂಬಾ ಡ್ಯಾನ್ಸ್ ತರಬೇತಿ, ಕುಣಿದು ಕುಪ್ಪಳಿಸಿದ ಖಾಕಿ
ನಗರದ ಈಶಾನ್ಯ ವಿಭಾಗದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಹಾಗೂ ದರೋಡೆ ಪ್ರಕರಣದ ಪ್ರಾಪರ್ಟಿ ಪರೇಡ್ ಕಾರ್ಯಕ್ರಮ ಮ್ಯಾನತಾ ಟೆಕ್ ಪಾರ್ಕ್ನಲ್ಲಿ ಗುರುವಾರ ಜರುಗಿತು.

ಬೆಂಗಳೂರು: ನಗರದ ಈಶಾನ್ಯ ವಿಭಾಗದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಹಾಗೂ ದರೋಡೆ ಪ್ರಕರಣದ ಪ್ರಾಪರ್ಟಿ ಪರೇಡ್ ಕಾರ್ಯಕ್ರಮ ಮ್ಯಾನತಾ ಟೆಕ್ ಪಾರ್ಕ್ನಲ್ಲಿ ಗುರುವಾರ ಜರುಗಿತು.
ಈ ವೇಳೆ ಕೆಲಸದ ಒತ್ತಡದಿಂದ ಬಸವಳಿದಿರವ ಪೊಲೀಸರಿಗೆ ಜುಂಬಾ ಡ್ಯಾನ್ಸ್ ಹೇಳಿಕೊಡಲಾಯಿತು. ಅತ್ಯಂತ ಅಮಿತೋತ್ಸಾಹದಿಂದ ಪೊಲೀಸರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
ಡಿಸಿಪಿ ಭಿಮಾಶಂಕರ್ ಗುಳೇದ್ ಅವರ ನೇತೃತ್ವದಲ್ಲಿ ಈಶ್ಯಾನ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮೊಬೈಲ್ , ಮನೆಗಳವು, ಸುಲಿಗೆ, ದರೋಡೆ ಹಾಗೂ ಅಪಹರಣ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳನ್ನು ಇಂದು ಮಾಲೀಕರಿಗೆ ವಾಪಸ್ ನೀಡಿ ಮಾತನಾಡಿದ ನಟ ಪುನೀತ್ ರಾಜ್ ಕುಮಾರ್, ಪೊಲೀಸರು ನಿಜವಾದ ಹೀರೋಗಳು. ನಮ್ಮ ಸುರಕ್ಷತೆಗೆ ನೀವೇ ಕಾರಣ. ನಾನು ಸಿನಿಮಾದಲ್ಲಿ ನಟಿಸುತ್ತೇನೆ ಅಷ್ಟೇ, ಆದರೆ ನೈಜ ಬದುಕಿನ ಹಿರೋಗಳು ನೀವೇ ಎಂದು ಹೊಗಳಿದರು.
ಪೊಲೀಸ್ ಅಧಿಕಾರಿಗಳು ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಯೋಗ ಮಾಡಿ ತುಂಬಾ ಕಾಮ್ ಆಗಿ ಇರಬೆಕು. ನಮ್ಮದು-ಪೊಲೀಸ್ ಅಧಿಕಾರಿಗಳದ್ದು ಹಳೇಯ ಸಂಬಂಧ. ಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ಹಾಯ್ ಬಾಯ್ ಹೇಳುತ್ತೇವೆ. ಆದರೆ, ಪೊಲೀಸರನ್ನು ಮರೆಯುತ್ತೇವೆ ಎಂಬ ಮಾತೊಂದನ್ನು ನಮ್ಮ ತಂದೆಯವರು ಹೇಳುತ್ತಿದ್ದರು ಎಂದು ಪುನಿತ್ ಸ್ಮರಿಸಿಕೊಂಡರು.
ಇಂದು ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೇನೆ. ವಾರಸುದಾರರಿಗೆ ವಸ್ತುಗಳನ್ನು ಹಿಂತಿರುಗಿಸಲು ನನ್ನನ್ನು ಪೊಲೀಸ್ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ. ಈಶ್ಯಾನ ವಿಭಾಗದಲ್ಲೇ ನಮ್ಮ ಮನೆ ಸಹ ಇರುವುದರಿಂದ ಇದು ನಮ್ಮ ಏರಿಯಾ. ಅದಕ್ಕೆ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಪೊಲೀಸರು ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಮಾನಸಿಕವಾಗಿ ಸದೃಢಗೊಳ್ಳಲು ಜುಂಬಾ ಡ್ಯಾನ್ಸ್ ಹೇಳಿ ಕೊಡಲಾಯಿತು. ಈಶಾನ್ಯ ವಿಭಾಗದಲ್ಲಿ 900 ಜನ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 300 ಜನರಂತೆ 3 ಶಿಫ್ಟ್ ನಲ್ಲಿ ಪೊಲೀಸರಿಗೆ ಜುಂಬಾ ತರಬೇತಿ ನೀಡಲಾಯಿತು.
ಪೊಲೀಸರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಟಗರು ಹಾಡಿಗೆ, ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್, ಉಳಿದವರು ಕಂಡಂತೆ ಚಿತ್ರದಲ್ಲಿನ ರಕ್ಷಿತ್ ಶೆಟ್ಟಿಯ ಹುಲಿ ನೃತ್ಯದ ಹಾಡಿಗೆ ಸಖತ್ ಜುಂಬಾ ಸ್ಟೇಪ್ ಹಾಕಿ ಎಂಜಾಯ್ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


