ಸಿನಿಮೀಯ ರೀತಿಯಲ್ಲಿ ನಕಲಿ ಪೊಲೀಸರಿಂದ ವಂಚನೆ
ಪೊಲೀಸ್ ವೇಷದಲ್ಲಿ ಬಂದ ಕಳ್ಳರ ತಂಡ, ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನಿಂದ 2.10 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ನಡೆದಿದೆ.

ಹೊಸಪೇಟೆ: ಪೊಲೀಸ್ ವೇಷದಲ್ಲಿ ಬಂದ ಕಳ್ಳರ ತಂಡ, ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನಿಂದ 2.10 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ನಡೆದಿದೆ.
ಮೃತ್ಯುಂಜಯನಗರದ ಸಿದ್ದರಾಮಪ್ಪ ಮೋಸ ಹೋದ ವ್ಯಕ್ತಿಯಾಗಿದ್ದು. ಇದೇ ಭಾನುವಾರ ಸಿದ್ದರಾಮಪ್ಪ ಐದು ಉಂಗುರ, ಡಾಲರ್ ಸಹಿತ ಚಿನ್ನದ ಸರ ಹಾಕಿಕೊಂಡು ದಾರಿಯಲ್ಲಿ ಹೋಗುತ್ತಿದ್ದರು. ಈತನನ್ನು ನಕಲಿ ಪೊಲೀಸರು ಬೈಕ್‌ನಲ್ಲಿ ಹಿಂಬಾಲಿಸಿ. ಬಳಿಕ ಸಿದ್ದರಾಮಪ್ಪ ಮುಂದೆ ಬಂದು ಮೈಮೇಲೆ ಬೆಲೆ ಬಾಳುವ ಚಿನ್ನಾಭರಣ ಹಾಕಿಕೊಂಡು ಓಡಾಡಬಾರದೆಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಂಬಿಕೆ ಬರಲಿ ಎಂದು ನಕಲಿ ಪೊಲೀಸ್ ಐಡಿ ಕಾರ್ಡ್ ಕೂಡ ತೋರಿಸಿದ್ದಾರೆ, ನಂತರ ಚಿನ್ನಾಭರಣ ಬಿಚ್ಚುತಿದ್ದಂತೆ ಅವುಗಳನ್ನ ಸುರಕ್ಷಿತವಾಗಿ ಕಟ್ಟಿಕೊಡುವುದಾಗಿ ಹೇಳಿ ಪಡೆದು ಬಟ್ಟೆಯಲ್ಲಿ ಸುತ್ತಿ ಕೊಡುವ ನಾಟಕ ಆಡಿ ಅವುಗಳನ್ನ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


