'ಪ್ರತಿಯೊಬ್ಬ ಎಂಎಲ್ಎ ಮತ್ತು ಎಂಎಲ್ ಸಿಗಳು ತಲಾ 3 ಶಾಲೆ ದತ್ತು ಪಡೆಯಲಿ'
ಶಾಲೆಗಳ ಸುಧಾರಣೆಗಾಗಿ ಶಾಸಕರು ತಲಾ 3 ಹಾಗೂ ಸಂಸದರು ತಲಾ 5 ಶಾಲೆಗಳನ್ನು ದತ್ತು ಪಡೆಯಬೇಕು, ಇದರಿಂದ ಸುಮಾರು 1,100ರಷ್ಟು ಶಾಲೆಗಳಿಗೆ ಮರುಜೀವ ಸಿಗುವುದು ಸಾಧ್ಯವಿದೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಬೆಂಗಳೂರು: ಶಾಲೆಗಳ ಸುಧಾರಣೆಗಾಗಿ ಶಾಸಕರು ತಲಾ 3 ಹಾಗೂ ಸಂಸದರು ತಲಾ 5 ಶಾಲೆಗಳನ್ನು ದತ್ತು ಪಡೆಯಬೇಕು, ಇದರಿಂದ ಸುಮಾರು 1,100ರಷ್ಟು ಶಾಲೆಗಳಿಗೆ ಮರುಜೀವ ಸಿಗುವುದು ಸಾಧ್ಯವಿದೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿ ನೇಮಕ ಮಾಡುವಾಗ ಅತ್ಯಂತ ಸಮರ್ಥರನ್ನೇ ಆಯ್ಕೆ ಮಾಡಬೇಕು, ಇದರಿಂದ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸುಭದ್ರವಾಗುತ್ತದೆ, ಉಳಿದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವಾಗ ಅರ್ಹತೆಯಷ್ಟೇ ಮಾನದಂಡವಾಗಬೇಕು ಎಂದು ಹೇಳಿದ್ದಾರೆ,
ಶೋಧನಾ ಸಮಿತಿ ಅತ್ಯಂತ ಸಮರ್ಥರನ್ನು ಆಯ್ಕೆ ಮಾಡಬೇಕಿದ್ದು, ಭ್ರಷ್ಟಾಚಾರಕ್ಕೆ ಅವಕಾಶ ಕೊಡದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದೇನೆ ಎಂದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನ ಒದಗಿಸಲಾಗಿದ್ದರೂ, ಅದನ್ನು ಖರ್ಚು ಮಾಡಿಯೇ ಇಲ್ಲ. ಸಮರ್ಥ ನಾಯಕತ್ವದ ಕೊರತೆಯಿಂದ ಇಂತಹ ತೊಂದರೆಗಳು ಉಂಟಾಗುತ್ತವೆ’ ಎಂದರು.
‘ಉದ್ಯೋಗ ಅವಕಾಶ ಇಲ್ಲದ ಕಾರಣ ಕೆಲವು ಪದವಿ ತರಗತಿಗಳು ಮುಚ್ಚುತ್ತಿವೆ. ಇದಕ್ಕಾಗಿ ಪದವಿ ಹಂತದಲ್ಲಿ ಉದ್ಯೋಗ ಅವಕಾಶದ ಒಂದು ವಿಷಯವನ್ನು ಸೇರಿಸಿಕೊಳ್ಳುವಂತಹ ಸಿಬಿಸಿಎಸ್ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


