ರಾಜ್ಯ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಅಭಿಮಾನಿ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಗೆ ತಮ್ಮನ್ನ ಬೇಟಿಮಾಡುವ ಅವಕಾಶ ನೀಡಿ ಆತನ ಆಸೆ ಈಡೇರಿಸಿದ್ದಾರೆ. ಅಲ್ಲದೆ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆವನ್ನೆ ನೀಡಿದ್ದಾರೆ.

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಅಭಿಮಾನಿ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಹಾಗೂ ಆದರ್ಶ ಕುಟುಂಬ
Published On :

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಗೆ ತಮ್ಮನ್ನ ಬೇಟಿಮಾಡುವ ಅವಕಾಶ ನೀಡಿ ಆತನ ಆಸೆ ಈಡೇರಿಸಿದ್ದಾರೆ. ಅಲ್ಲದೆ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆವನ್ನೆ ನೀಡಿದ್ದಾರೆ.

ಹೊಸಪೇಟೆ ನಗರದ ಆದರ್ಶ ಎನ್ನುವ 18ವರ್ಷದ ಈ ಯುವಕ ಹುಟ್ಟಿದಾಗಿನಿಂದ ಮಾಂಸ ಕಂಡಗಳ ಬೆಳವಣಿಗೆ ಇಲ್ಲದೆ ಆನಾರೋಗ್ಯಕ್ಕೆ ಒಳಗಾಗಿದ್ದ. ಇನ್ನು ಆದರ್ಶನ ತಂದೆ ತಾಯಿಗಳು ಈತನಿಗೆ ಚಿಕಿತ್ಸೆಕೊಡಿಸಲು ಪಟ್ಟ ಕಷ್ಟ ಬೆಟ್ಟದಷ್ಟು. ಆಟೋ ಚಾಲಕನಾಗಿರುವ ಆದರ್ಶನ ತಂದೆ ಹನುಮಂತ, ಇತ್ತೀಚೆಗೆ ಆಸ್ಪತ್ರೆಗೆ ಹಣ ಇಲ್ಲದೆ ಕೈಚಲ್ಲಿ ಕುಳಿತಿದ್ದ. ಇನ್ನು ಈ ಆದರ್ಶನಿಗೆ ಇರುವ ವಿಚಿತ್ರ ಕಾಯಿಲೆ ಮತ್ತು ಆತನಲ್ಲಿರುವ ಪುನಿತ್ ಮೇಲಿನ ಅಭಿಮಾನದ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು, ಸುದ್ದಿ ತಿಳಿದ ಪುನೀತ್ ರಾಜ್ ಕುಮಾರ್, ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಯೋಗಕ್ಷೇಮ ವಿಚಾರಿಸಿ ಅವರಿಗೆ ಚಿಕಿತ್ಸೆ ಕೊಡಿಸುವ ಭರವಸೆ‌ನೀಡಿದ್ದಾರೆ.

ದೇಹದಲ್ಲಿ ಆನಾರೋಗ್ಯ ಇದ್ದರೂ ಪುನೀತ್ ಪಿಲ್ಮ್ ಎಂದ್ರೆ ಎಲ್ಲಿಲ್ಲದ ಪ್ರಾಣ ಈ ಆದರ್ಶನಿಗೆ. ಪುನೀತ್ ಚಿತ್ರ ಬಿಡುಗಡೆ ಗೊಂಡ್ರೆ ತಂದೆ ಸಹಾಯದಿಂದ ಚಿತ್ರಂಮದಿರಕ್ಕೆ ಹೋಗಿ ಸಿನಿಮಾ ನೋಡುತಿದ್ದ. ಇಂತಾ ವಿಶೇಷ ಅಭಿಮಾನಿ ಕಾಯಲೆ ಗುಣಪಡಿಸಲು ಬೇಕಾದ ಖರ್ಚು ಬರಿಸಲು ಮುಂದಾಗಿರುವ ಪುನೀತ್, ಸ್ಪರ್ಶ ಆಸ್ಪತ್ರೆಯ ವೈದ್ಯರಿಗೆ ಈ ಕಾಯಿಲೆ ಗುಣಪಡಿಸುವ ಹೊಣೆ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ವೈದ್ಯರು ಇನ್ನೆರಡು ದಿನಗಳಲ್ಲಿ ರೋಗ ಲಕ್ಷಣಗಳನ್ನ ಗುರುತಿಸಿ ಚಿಕಿತ್ಸೆಗೆ ಸಿದ್ದತೆ ಮಾಡಿಕೊಳ್ಳಲಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.