ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಟಿ-ಐಐಐಬಿ ಅಳವಡಿಕೆ; ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ!
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವಿಮಾನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಸಿಕ್ಕಿದೆ.

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವಿಮಾನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಸಿಕ್ಕಿದೆ.
ವಾತಾವರಣ ವ್ಯತ್ಯಯದಿಂದಾಗಿ ಕಡಿಮೆ ಗೋಚರತೆ ಪರಿಸ್ಥಿತಿಯ ಕಾರಣ ವಾರ್ಷಿಕ ಅದೆಷ್ಟೋ ಸಾವಿರ ವಿಮಾನ ಪ್ರಯಾಣಿಕರ ಯೋಜನೆಗಳು ರದ್ದಾಗುತ್ತಿತ್ತು. ಆದರೆ ಇನ್ನು ಮುಂದೆ ಕಡಿಮೆ ಗೋಚರತೆ ಪರಿಸ್ಥಿತಿಯ ನಡುವೆಯೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆಗಲಿವೆ.
ಕಡಿಮೆ ಗೋಚರತೆ ಪರಿಸ್ಥಿತಿಯ ನಡುವೆಯೂ ಕಾರ್ಯಾಚರಣೆ ನಡೆಸುವಂತಹ ಸಿಎಟಿ-ಐಐಐಬಿ ತಂತ್ರಜ್ಞಾನವನ್ನು ಪಡೆದಿದೆ. ಈ ರೀತಿಯ ಸೌಲಭ್ಯ ಹೊಂದಿರುವ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6 ನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಬಿ ಪಾತ್ರವಾಗಿದೆ.
ರನ್ ವೇಯಲ್ಲಿ 50m ವರೆಗಿನ ಗೋಚರತೆ ರೇಂಜ್ ವರೆಗೂ ಲ್ಯಾಂಡಿಂಗ್ ಹಾಗೂ 125m ವರೆಗಿನ ಗೋಚರತೆ ರೇಂಜ್ ವರೆಗೂ ಟೇಕ್ ಆಫ್ ಸಾಧ್ಯವಾಗಲಿದೆ. ಈ ವರೆಗೂ 550ಎಂ ಹಾಗೂ 300 ಎಂ ವರೆಗೂ ಅನುಕ್ರಮವಾಗಿ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಗೆ ಅನುಮತಿ ಇತ್ತು. ಮಂಜು ಮುಸುಕಿದ ವಾತಾವರಣದಿಂದಾಗಿ ಸಾಮಾನ್ಯವಾಗಿ ವಿಮಾನಗಳು ವಿಳಂಬವಾಗುತ್ತಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


