ರಾಜ್ಯ

ಉತ್ತರ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ: ಶೀಘ್ರದಲ್ಲಿಯೇ ವೈಮಾನಿಕ ತರಬೇತಿ ಶಾಲೆ ಸ್ಥಾಪನೆ

ಪೈಲಟ್ ಗಳ ಕೊರತೆಯನ್ನು ನೀಗಿಸಲು 6 ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಸ್ಥಾಪಿಸುತ್ತಿದ್ದು, ಅವುಗಳಲ್ಲಿ ಎರಡು ಉತ್ತರ ಕರ್ನಾಟಕದಳಲ್ಲಿ ತಲೆಯೆತ್ತಲಿವೆ.

ಉತ್ತರ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ: ಶೀಘ್ರದಲ್ಲಿಯೇ ವೈಮಾನಿಕ ತರಬೇತಿ ಶಾಲೆ ಸ್ಥಾಪನೆ
ಬೆಳಗಾವಿ ವಿಮಾನ ನಿಲ್ದಾಣದಲ್ಲಿರುವ ವಾಯು ಸಂಚಾರ ದಟ್ಟಣೆ ನಿಯಂತ್ರಣ ಕೇಂದ್ರ
Published On :

ಬೆಂಗಳೂರು: ಪೈಲಟ್ ಗಳ ಕೊರತೆಯನ್ನು ನೀಗಿಸಲು 6 ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಸ್ಥಾಪಿಸುತ್ತಿದ್ದು, ಅವುಗಳಲ್ಲಿ ಎರಡು ಉತ್ತರ ಕರ್ನಾಟಕದಳಲ್ಲಿ ತಲೆಯೆತ್ತಲಿವೆ. 

ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಮಾನ ಹಾರಾಟ ತರಬೇತಿ ಶಾಲೆ ಆರಂಭವಾಗಲಿದ್ದು ಇದಕ್ಕೆ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಈ ಎರಡೂ ನಗರಗಳಲ್ಲಿನ ವಿಮಾನ ನಿಲ್ದಾಣಗಳು ಉಡಾನ್ ಯೋಜನೆಯಡಿ ಬರುತ್ತದೆ.

ಏರ್ ಚೀಫ್ ಮಾರ್ಷಲ್ (ನಿವೃತ್ತ) ಫಾಲಿ ಹೆಚ್ ಮೇಜರ್ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಎಫ್‌ಟಿಒಗಳನ್ನು ಸ್ಥಾಪಿಸುವ ನೀತಿಯನ್ನು ಘೋಷಿಸಲಾಯಿತು, ಇದು ವಾಯುಯಾನ ಕ್ಷೇತ್ರದಲ್ಲಿ ಪೈಲಟ್‌ಗಳ ಬೇಡಿಕೆಯ ಬಗ್ಗೆ ತಿಳಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 9,400 ಪೈಲಟ್‌ಗಳ ಅಗತ್ಯವಿರುತ್ತದೆ ಮತ್ತು ಪ್ರಸ್ತುತ, ಶೇಕಡಾ 30ರಷ್ಟು ಮಹತ್ವಾಕಾಂಕ್ಷಿ ಪೈಲಟ್‌ಗಳು ತರಬೇತಿ ಪಡೆಯಲು ವಿದೇಶಗಳಿಗೆ ಹೋಗುತ್ತಾರೆ, ಅಧಿಕ ಖರ್ಚುವೆಚ್ಚವಾಗುತ್ತದೆ, ಇದನ್ನು ತಪ್ಪಿಸಲು ಇಲ್ಲಿಯೇ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ತಿಳಿಸಿದರು.

ನಮ್ಮ ವಿಮಾನ ನಿಲ್ದಾಣದಲ್ಲಿ ನಾವು ಪ್ರಸ್ತಾಪಿಸಿರುವ ಎಫ್‌ಟಿಒ ರನ್ ವೇ ಅಡಿಯಲ್ಲಿ 10 ಮೀಟರ್ ಕೆಳಗೆ ಬರುತ್ತದೆ. ಅದಕ್ಕಾಗಿ ನಾವು ನಮ್ಮ ಭೂಮಿಯನ್ನು ಗುತ್ತಿಗೆಗೆ ನೀಡುತ್ತೇವೆ ಎಂದರು.

ಇತ್ತೀಚೆಗೆ ನಡೆದ ಪೂರ್ವ ಬಿಡ್ ಸಭೆಯಲ್ಲಿ ಐದು ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದವು. ಬಿಡ್ಡಿಂಗ್ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಬಿಡ್ ನೀಡಲು ಡಿಸೆಂಬರ್ 22 ಕೊನೆಯ ದಿನಾಂಕವಾಗಿದೆ. ಒಪ್ಪಂದವು ಅಂತಿಮಗೊಂಡ ನಂತರ ಶಾಲೆಯು ಅಸ್ತಿತ್ವಕ್ಕೆ ಬರಲು ಒಂದೂವರೆಯಿಂದ  2 ವರ್ಷಗಳು ಬೇಕಾಗಬಹುದು. 

ಉತ್ತರ ಕರ್ನಾಟಕದಲ್ಲಿ ಯಾವುದೇ ಪ್ರಮುಖ ವೈಮಾನಿಕ ಶಾಲೆಗಳಿಲ್ಲ.ಈ ಪ್ರದೇಶದಲ್ಲಿ ಪೈಲಟ್‌ಗಳಾಗಲು ಬಯಸುವವರಿಗೆ ಇದು ಸಹಾಯ ಮಾಡುತ್ತದೆ ಎಂದು ಮೌರ್ಯ ಹೇಳಿದರು. ಎಎಐ ನೀತಿಯ ಪ್ರಕಾರ, ಎಫ್‌ಟಿಒಗಳನ್ನು 25 ವರ್ಷಗಳ ಗುತ್ತಿಗೆ ಅವಧಿಯಲ್ಲಿ ಬಿಡ್ ದಾರರಿಗೆ ನೀಡಲಾಗುವುದು ಮತ್ತು ಒಪ್ಪಂದದ ಅವಧಿ ಮುಗಿದ ನಂತರ ಶೂನ್ಯ ವೆಚ್ಚದಲ್ಲಿ ಎಎಐಗೆ ಹಿಂತಿರುಗಿಸಲಾಗುತ್ತದೆ. ಈ ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲಿ ಗರಿಷ್ಠ ಎರಡು ಎಫ್‌ಟಿಒಗಳನ್ನು ಅನುಮತಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.