ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ಇಂದು ಕನ್ನಡ ಗಾದೆ ಟ್ರೆಂಡಿಂಗ್!
ಕನ್ನಡ ಭಾಷೆಯಲ್ಲಿ ಗಾದೆ ಮಾತುಗಳಿಗೇನು ಕೊರತೆಯಿಲ್ಲ, ಕನ್ನಡದ ಗಾದೆ ಮಾತುಗಳಿಗೆ ಸಹಸ್ರ ವರ್ಷದ ಇತಿಹಾಸವಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಜನಜನಿತ.

ಕನ್ನಡ ಭಾಷೆಯಲ್ಲಿ ಗಾದೆ ಮಾತುಗಳಿಗೇನು ಕೊರತೆಯಿಲ್ಲ, ಕನ್ನಡದ ಗಾದೆ ಮಾತುಗಳಿಗೆ ಸಹಸ್ರ ವರ್ಷದ ಇತಿಹಾಸವಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಜನಜನಿತ.
ಜೀವನದ ಮೌಲ್ಯಗಳು, ಆದರ್ಶಗಳು, ಅನುಭವಗಳು, ಸಂಸ್ಕೃತಿ, ಮನುಷ್ಯನ ನಡೆ-ನುಡಿಗಳ ಬಗ್ಗೆ ಮಾತನಾಡುವಾಗ ಹಿರಿಯರು ಗಾದೆ ಮಾತುಗಳನ್ನು ಸೇರಿಸಿ ಮಾತನಾಡುವುದನ್ನು ನಾವು ನೋಡುತ್ತೇವೆ.
ಈ ಸೋಷಿಯಲ್ ಮೀಡಿಯಾ ಯುಗದಲ್ಲಿ, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿಯೇ ಜನರು ಅದರಲ್ಲೂ ಯುವಜನತೆ ಸಮಯ ಕಳೆಯುತ್ತಿರುವಾಗ ತಂತ್ರಜ್ಞಾನ ಇಷ್ಟು ಸುಧಾರಣೆ ಕಂಡ ಮೇಲೆ ಐಫೋನ್, ಗ್ಯಾಜೆಟ್, ಟ್ಯಾಬ್ಲೆಟ್ ಗಳಲ್ಲಿ ಜನರು ಮುಳುಗಿರುವಾಗ ಗಾದೆ ಮಾತು ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ ಎಂದರೆ ನಂಬುತ್ತೀರಾ?
ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ನಿನ್ನೆ ಸಾಯಂಕಾಲದಲ್ಲಿ ಕನ್ನಡದ ಗಾದೆಮಾತುಗಳು ಕಾಣಿಸಿಕೊಳ್ಳಲಾರಂಭಿಸಿ ಇಂದು ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ಬೆಳಗ್ಗೆಯಿಂದ ಟ್ರೆಂಡಿಂಗ್ ನಲ್ಲಿದೆ. ಸಾವಿರಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ, ತಮಗಿಷ್ಟದ ಕನ್ನಡದ ಗಾದೆ ಮಾತುಗಳನ್ನು ಹಾಕುತ್ತಿದ್ದಾರೆ. ಕನ್ನಡ ಗಾದೆ ಎಂದು ಕನ್ನಡದಲ್ಲಿಯೇ ಹ್ಯಾಶ್ ಟಾಗ್ ಹಾಕಿ ಬರೆಯುತ್ತಿದ್ದಾರೆ.
ಒಂದು ಭಾಷೆ ಮೇಲೆ ಹೆಚ್ಚು ದಬ್ಬಾಳಿಕೆ ಆದಷ್ಟು ಆ ಭಾಷೆನ ಪ್ರಿತ್ಸೋರು ಹೆಚ್ಚು ಆಗ್ತಾರೆ. ಇಷ್ಟು ದಿನ ಬರಿ ಹಿಂದಿ, ತಮಿಳ್ ನಲ್ಲಿ ಟ್ರೆಂಡಿಂಗ್ ಇರೊದನ್ನ ನೊಡ್ತಿದ್ದೆ ಇವಾಗ ನಮ್ಮ ಕನ್ನಡದಲ್ಲಿ ನೋಡೊದಕ್ಕೆ ಸಂತೋಷವಾಗುತ್ತದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


