ಉತ್ತರ ಕರ್ನಾಟಕದ ಅತಿ ದೊಡ್ಡ ಪ್ರಾಣಿ ಸಂಗ್ರಾಲಯಕ್ಕೆ ಹೊಸ ಅತಿಥಿಗಳ ಆಗಮನ!
ವಿಶ್ವ ವಿಖ್ಯಾತ ಹಂಪಿ ಬಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಮೃಗ್ರಾಲಯಕ್ಕೆ ಇಬ್ಬರು ಅಪರೂಪದ ಅತಿಥಿಗಳ ಆಗಮನವಾಗಿದೆ. ಅರ್ಜುನ್ ಹೆಸರಿನ ಒಂದು ಬಿಳಿ ಹುಲಿ ಮತ್ತು ಏಳು ಬಿಳಿ ತೋಳಗಳನ್ನ ಕಳೆ ಎರಡು ವಾರಗಳ ಹಿಂದೆಯಷ್ಠೇ ಮೈಸೂರಿನ ಮೃಗಾಲಯದಿಂದ ಇಲ್ಲಿಗೆ ಕರೆತರಲಾಗಿದೆ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಬಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಮೃಗ್ರಾಲಯಕ್ಕೆ ಇಬ್ಬರು ಅಪರೂಪದ ಅತಿಥಿಗಳ ಆಗಮನವಾಗಿದೆ. ಅರ್ಜುನ್ ಹೆಸರಿನ ಒಂದು ಬಿಳಿ ಹುಲಿ ಮತ್ತು ಏಳು ಬಿಳಿ ತೋಳಗಳನ್ನ ಕಳೆ ಎರಡು ವಾರಗಳ ಹಿಂದೆಯಷ್ಠೇ ಮೈಸೂರಿನ ಮೃಗಾಲಯದಿಂದ ಇಲ್ಲಿಗೆ ಕರೆತರಲಾಗಿದೆ.
ಇಲ್ಲಿನ ಪರಿಸರಕ್ಕೆ ನಿಧಾನವಾಗಿ ಈ ಅಪರೂಪದ ಅತಿಥಿಗಳು ಹೊಂದಿಕೊಳ್ಳುತಿದ್ದು, ಇನ್ನೇನು ಸೆಪ್ಟಂಬರ್ ತಿಂಗಳು ಮೊದಲ ಅಥವಾ ಎರಡನೆ ವಾರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಈ ಅತಿಥಿಗಳು ಗೋಚರವಾಗುವ ಸಾಧ್ಯತೆ ಇದೆ.
ಹೊಸಪೇಟೆ ತಾಲೂಕಿನ ಕಮಲಾಪುರ ಬಳಿಯ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಜಿಯೊಲಾಜಿಕಲ್ ಪಾರ್ಕ್ ಲೋಕಾರ್ಪಣೆಗೊಂಡಿತ್ತು. ಅದರಲ್ಲಿ 150ಹೆಕ್ಟೆರ್ ಪ್ರದೇಶದಲ್ಲಿ ಹುಲಿ ಸಫಾರಿ, ಜಿಂಕೆ ಸಫಾರಿ, ಸಿಂಹದ ಸಫಾರಿ, ಸೇರಿದಂತೆ ಮೃಗ್ರಾಲಯವನ್ನ ಕೂಡ ಪ್ರಾರಂಭಿಸಲಾಗಿದೆ.ಈ ಹಿನ್ನೆಲೆಯಲ್ಲಿ ಈ ಪ್ರಾಣಿ ಮೃಗ್ರಾಲಯಕ್ಕೆ ಈ ಹೊಸ ಅತಿಥಿಗಳು ಸೇರ್ಪಡೆಗೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿಯೇ ಮೊದಲ ಅತಿ ದೊಡ್ಡ ಪ್ರಾಣಿ ಸಂಗ್ರಾಲಯ ಇದಾಗಿದ್ದು, ಇನ್ನು ಮುಂದೆ ಪ್ರವಾಸಿಗರನ್ನ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ, ಹಂಪಿಯ ಪ್ರವಾಸಕ್ಕೆ ಬರುವ ಪ್ರತಿ ದೇಶಿ ವಿದೇಸಿ ಪ್ರವಾಸಿಗರನ್ನ ಆಕರ್ಷಿಸುವ ಈ ಉದ್ಯಾನವನ ದೇಶ ವಿದೇಶದಲ್ಲಿ ಹೆಸರುಮಾಡಲಿದೆ.ತುಂಗಭದ್ರ ಜಲಾಶಯ, ಸಂಡೂರು ಕುಮಾರಸ್ವಾಮಿ ದೇವಸ್ಥಾನ, ಮತ್ತು ಅಲ್ಲಿನ ಅರಣ್ಯ ಪ್ರದೇಶ, ಹಾಗೂ ಕರಡಿದಾಮ ಮತ್ತು ವಿಶ್ವ ವಿಖ್ಯಾತ ಹಂಪಿಯಂತ ಪ್ರಮುಖ ಪ್ರವಾಸಿ ತಾಣಗಳು ಕೇವಲ ಮುವತ್ತು ಕಿಲೋಮಿಟರ್ ವ್ಯಾಪ್ತಿಯಲ್ಲಿದ್ದು, ಬಲು ಬೇಗ ಪ್ರವಾಸಿಗರನ್ನ ಆಕರ್ಷಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


