ರಾಜ್ಯ

ಹೊಸಪೇಟೆ: ಶವ ಸಂಸ್ಕಾರ ಇವರ ಕಾಯಕ, ನಿಸ್ವಾರ್ಥ ಸೇವೆ!

ಈ ಮಹಾಮಾರಿ ಕೊರೊನ ವಕ್ಕರಿಸಿದಾಗಿನಿಂದ ಸಂಭಂದಿಗಳೇ ಶವ ಸಂಸ್ಕಾರ ಮಾಡಲು ಬರುವುದಕ್ಕೆ ಹಿಂಜರಿಯುತಿದ್ದಾರೆ, ಆದರೆ ಇಲ್ಲೊಂದು ತಂಡ ಇದೆ, ಶವ ಸಂಸ್ಕಾರದ ಸುದ್ದಿ ತಿಳಿದರೆ ಸಾಕು ಆ ಸ್ಥಳಕ್ಕೆ ದಾವಿಸುತ್ತೆ ಈ ಸಂಸ್ಕಾರಿಗಳ ಗುಂಪು.

ಹೊಸಪೇಟೆ: ಶವ ಸಂಸ್ಕಾರ ಇವರ ಕಾಯಕ, ನಿಸ್ವಾರ್ಥ ಸೇವೆ!
ಸಂಸ್ಕಾರಿಗಳ ತಂಡ
Published On :

ಹೊಸಪೇಟೆ: ಈ ಮಹಾಮಾರಿ ಕೊರೊನ ವಕ್ಕರಿಸಿದಾಗಿನಿಂದ ಸಂಭಂದಿಗಳೇ ಶವ ಸಂಸ್ಕಾರ ಮಾಡಲು ಬರುವುದಕ್ಕೆ ಹಿಂಜರಿಯುತಿದ್ದಾರೆ, ಆದರೆ ಇಲ್ಲೊಂದು ತಂಡ ಇದೆ, ಶವ ಸಂಸ್ಕಾರದ ಸುದ್ದಿ ತಿಳಿದರೆ ಸಾಕು ಆ ಸ್ಥಳಕ್ಕೆ ದಾವಿಸುತ್ತೆ ಈ ಸಂಸ್ಕಾರಿಗಳ ಗುಂಪು. 

ಇಂತದ್ದೊಂದು ತಂಡ ಇರುವುದು ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ, ಹೌದು ಅವರು ಬೇರಾರು ಅಲ್ಲ ಪಾಪುಲರ್ ಪ್ರಂಟ್ ಆಪ್ ಇಂಡಿಯಾದ ಸದಸ್ಯರು. ಸುಮಾರು ಇಪ್ಪತ್ತರಿಂದ ಮುವತ್ತು ಸದಸ್ಯರಿರುವ ಈ ತಂಡ  ಕಳೆದ ನಾಲ್ಕು ತಿಂಗಳಲ್ಲಿ 75ಕ್ಕೂ ಹೆಚ್ಚು ಶವ ಸಂಸ್ಕಾರಗಳನ್ನ ಮಾಡಿದ್ದಾರೆ. 

ಅಂದಹಾಗೆ ಇವರು ಮಾಡಿರುವ ಈ ಎಲ್ಲಾ ಶವ ಸಂಸ್ಕಾರಗಳು ಕೋವಿಡ್ ನಿಂದ ಸಾವಿಗೀಡಾಗಿರುವ ಶವಗಳೇ, ಇನ್ನು ಇವರು ಸಂಸ್ಕಾರಮಾಡುವ ಶವಗಳಿಗೆ ಜಾತಿ ಧರ್ಮಗಳ ಮಿತಿ ಇಲ್ಲ. ಯಾವುದೇ ಜಾತಿ ಧರ್ಮದ ಶವಗಳಾದರೂ ಸರಿ, ಅವರ ಧರ್ಮದ ಆಚಾರ ಪದ್ದತಿಯಂತೆ ಸಂಸ್ಕಾರಮಾಡಿ ಶವಗಳಿಗೆ‌ ಮುಕ್ತಿ ನೀಡುತಿದ್ದಾರೆ.

ಅದರಂತೆ ನಿನ್ನೆ ಸಂಜೆ ಕೂಡ ಹೊಸಪೇಟೆ ತಾಲೂಕು ಕಮಲಾಪುರದಲ್ಲಿ ಸಚಿವ ಆನಂದ್ ಸಿಂಗ್ ಅವರ ಸಹೋದರ ಸಂಭಂದಿಯೊಬ್ಬರ ಶವ ಸಂಸ್ಕಾರಮಾಡಿದ್ದಾರೆ, ಕೊರೋನ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯನ್ನ ಅವರ ಧರ್ಮದ ಆಚಾರದಂತೆ ಎಲ್ಲಾ ವಿಧಿ ವಿದಾನಗಳನ್ನ ಪೂರೈಸಿ ಸಂಸ್ಕಾರ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಹೊಸಪೇಟೆ ನಗರದಲ್ಲಿ ಮಾತ್ರವಲ್ಲ ಗಣಿ ಜಿಲ್ಲೆಯಾಧ್ಯಂತ ಪ್ರಸಂಶೆ ವ್ಯಕ್ತವಾಗುತ್ತಿದೆ. 

ಅದರಲ್ಲೂ ಕೊರೊನ ಸೋಂಕಿನಿಂದ ಸಾವಿಗೀಡಾಗಿದ್ದ ಶವಗಳ ಸಂಸ್ಕಾರಮಾಡುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೊವಾಗಿತ್ತು. ಆದ್ರೆ ಈ ತಂಡದ ಸದಸ್ಯರು ಕೈ ಜೋಡಿಸಿದಾಗಿನಿಂದ ಶವ ಸಂಸ್ಕಾರಕ್ಕೆ ಸಂಭಂದಿಸಿದ ಯಾವುದೇ ವಿವಾದಗಳು ತಲೆದೂರಿಲ್ಲ, ಶಿರಗುಪ್ಪ, ಮತ್ತು ಬಳ್ಳಾರಿ, ಸೇರಿದಂತೆ ಹೊಸಪೇಟೆ ತಾಲೂಕಿನಲ್ಲಿ ಈ ಸದಸ್ಯರ ತಂಡ ಸಕ್ರೀಯವಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.