ಆನೆ ದಾಳಿಯಿಂದ ಸಾವನ್ನಪ್ಪಿದ ಪಾಲಕನ ಕುಟುಂಬಕ್ಕೆ ಮೈಸೂರು ಮೃಗಾಲಯದಿಂದ 10 ಲಕ್ಷ ರೂ ಪರಿಹಾರ ಘೋಷಣೆ
ಆನೆಯೊಂದರ ದಾಳಿಯಿಂದ ಮೃತಪಟ್ಟ ಪಾಲಕ ಹರೀಶ್ ಅವರ ಹತ್ತಿರದ ಸಂಬಂಧಿಗಳಿಗೆ ಮೈಸೂರು ಮೃಗಾಲಯ ಶನಿವಾರ 10 ಲಕ್ಷ ರೂ ಪರಿಹಾರವನ್ನು ಪ್ರಕಟಿಸಿದೆ.

ಮೈಸೂರು: ಆನೆಯೊಂದರ ದಾಳಿಯಿಂದ ಮೃತಪಟ್ಟ ಪಾಲಕ ಹರೀಶ್ ಅವರ ಹತ್ತಿರದ ಸಂಬಂಧಿಗಳಿಗೆ ಮೈಸೂರು ಮೃಗಾಲಯ ಶನಿವಾರ 10 ಲಕ್ಷ ರೂ ಪರಿಹಾರವನ್ನು ಪ್ರಕಟಿಸಿದೆ.
‘ಇದೊಂದು ದುರದೃಷ್ಟಕರ ಘಟನೆ. ಮೃಗಾಲಯ ದಕ್ಷ ಪಾಲಕನೊಬ್ಬನನ್ನು ಕಳೆದುಕೊಂಡಿದೆ. ದಾಳಿ ನಡೆಸಿರುವ ಆನೆ ಹೇಳಿದ ಮಾತು ಕೇಳುತ್ತಿತ್ತು . ಪಾಲಕನ ಆಜ್ಞೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿತ್ತು. ಆದರೆ, ದಾಳಿ ನಡೆಸಿರುವುದು ದಿಗ್ರ್ಭಾಂತಿಯನ್ನುಂಟುಮಾಡಿದೆ.’ ಎಂದು ಮೃಗಾಲಯ ಇಂದು ಸಂಜೆ ಇಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮೃಗಾಲಯದ 39 ವರ್ಷದ ಪಾಲಕ ಹರೀಶ್ ಅವರು ಶುಕ್ರವಾರ ಸಂಜೆ ಅಪ್ರಚೋದಿತ ದಾಳಿಯಲ್ಲಿ ಅವರೇ ಆರೈಕೆ ಮಾಡುತ್ತಿದ್ದ ಆನೆ ತುಳಿತದಿಂದ ಸಾವನ್ನಪ್ಪಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


