ಮೈಸೂರು: ಕೆ.ಆರ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳಿವೆ, ಆದರೆ ಆಕ್ಸಿಜನ್ ಕೊರತೆ!
ನಗರದ ಕೆಆರ್ ಆಸ್ಪತ್ರೆಗೆ ಇತ್ತೀಚೆಗೆ ಪಿಎಂ ಕೇರ್ಸ್ ನಿಧಿಯಿಂದ 20 ವೆಂಟಿಲೇಟರ್ ಬಂದಿದ್ದು, ಆದರೆ ಆಸ್ಪತ್ರೆಗೆ ಅವುಗಳನ್ನು ಸ್ಥಾಪಿಸಲು ಆಕ್ಸಿಜನ್ ಪೂರೈಕೆಯೊಂದಿಗೆ ಸಾಕಷ್ಟು ಹಾಸಿಗೆಗಳಿಲ್ಲದ ಕಾರಣ ಅವೆಲ್ಲವನ್ನೂ ಬಳಸಲು ಸಾಧ್ಯವಾಗುತ್ತಿಲ್ಲ.

ಮೈಸೂರು: ನಗರದ ಕೆಆರ್ ಆಸ್ಪತ್ರೆಗೆ ಇತ್ತೀಚೆಗೆ ಪಿಎಂ ಕೇರ್ಸ್ ನಿಧಿಯಿಂದ 20 ವೆಂಟಿಲೇಟರ್ ಬಂದಿದ್ದು, ಆದರೆ ಆಸ್ಪತ್ರೆಗೆ ಅವುಗಳನ್ನು ಸ್ಥಾಪಿಸಲು ಆಕ್ಸಿಜನ್ ಪೂರೈಕೆಯೊಂದಿಗೆ ಸಾಕಷ್ಟು ಹಾಸಿಗೆಗಳಿಲ್ಲದ ಕಾರಣ ಅವೆಲ್ಲವನ್ನೂ ಬಳಸಲು ಸಾಧ್ಯವಾಗುತ್ತಿಲ್ಲ.
ನಿರ್ಣಾಯಕ ಕೋವಿಡ್ -19 ರೋಗಿಗಳಲ್ಲಿ ಜೀವ ಬೆಂಬಲ ವ್ಯವಸ್ಥೆಗಳ ಅಗತ್ಯವನ್ನು ಪರಿಹರಿಸಲು ಪಿಎಂ ಕೇರ್ಸ್ ಅಡಿಯಲ್ಲಿ ಒದಗಿಸಲಾಗುತ್ತಿದೆ. ಕೋವಿಡ್ ಕ್ರಮಗಳ ಭಾಗವಾಗಿ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಒದಗಿಸಿದ 15 ಸುಧಾರಿತ ವೆಂಟಿಲೇಟರ್‌ಗಳ ಕಥೆಯೂ ಕೂಡ ಇದೇ ಆಗಿದೆ.
ಕೆಆರ್ ಆಸ್ಪತ್ರೆಯಲ್ಲಿ ಕೇವಲ 100 ಹಾಸಿಗೆಗಳು ಆಕ್ಸಿಜನ್ ಪೈಪ್ ಹೊಂದಿದ್ದು, ಅದನ್ನು ವೆಂಟಿಲೇಟರ್‌ಗೆ ಜೋಡಿಸಬೇಕಾಗಿದೆ. ಇವುಗಳನ್ನು ಹೊರತುಪಡಿಸಿ, ಈಗಾಗಲೇ 90 ವೆಂಟಿಲೇಟರ್ ಗಂಬೀರ ಸ್ಥಿತಿಲ್ಲಿರುವ ರೋಗಿಗಳಿಗೆ ಅಳವಡಿಸಲಾಗಿದೆ, ಒಂದು ವೇಳೆ ಅವುಗಳನ್ನು ತೆಗದೆರೇ ರೋಗಿಗಳ ಜೀವಕ್ಕೆ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಕೋವಿಡ್ ಆಸ್ಪತ್ರೆಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಇದುವರೆಗೂ 32 ವೆಂಟಿಲೇಟರ್ ನೀಡಲಾಗಿದ್ದು, ಅವುದ ಅಗತ್ಯವಿದ್ದರೇ 18 ವೆಂಟಿಲೇಟರ್ ಗಳನ್ನು ಇನ್ನೂ ಅಳವಡಿಸಲಾಗಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದ ಬೆಡ್ ಮತ್ತು ಆಕ್ಸಿಜನ್ ಪೈಪ್ ಆಸ್ಪತ್ರೆಗಳಿಗೆ ಬೇಕಾಗುತ್ತದೆ. ಇನ್ನೂ ಒಂದು ದ್ರವ ಆಮ್ಲಜನಕ ಸ್ಥಾವರವು ಬಹುಕಾಲದಿಂದ ಬಾಕಿ ಉಳಿದಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಸಂಶೋಧನಾ ಸಂಸ್ಥೆಯ ಡಾ.ಸಿ.ಪಿ ನಿರಂಜನ್ ಹೇಳಿದ್ದಾರೆ.
ಆಮ್ಲಜನಕದ ಬೆಂಬಲದೊಂದಿಗೆ ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ, ಉಳಿದವುಗಳನ್ನು ನಿರ್ಮಾಣ ಹಂತದಲ್ಲಿರುವ ತುರ್ತು ನಿಗಾ ಘಟಕದಲ್ಲಿ ಸ್ಥಾಪಿಸಲು ಅವರು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


