ಶಿವಮೊಗ್ಗ: ಕಂಡಕಂಡಲ್ಲಿ ಉಗಿದರೆ ಭಾರೀ ದಂಡ!
ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತ್ತಿದೆ. ದಿಢೀರ್ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದ್ದಾರೆ

ಶಿವಮೊಗ್ಗ: ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತ್ತಿದೆ. ದಿಢೀರ್ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದ್ದಾರೆ
ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಕಂಡಕಂಡಲ್ಲಿ ಉಗಿಯುವವರನ್ನು ಹಿಡಿದು, ಸ್ಥಳದಲ್ಲೇ ದಂಡ ಕಟ್ಟಸಿಕೊಂಡು ಎಚ್ಚರಿಸುತ್ತಿದ್ದಾರೆ.
ಪದೇ ಪದೇ ಅದೇ ತಪ್ಪು ಮಾಡುವವರಿಗೆ ಇನ್ನಷ್ಟು ಚುರುಕು ಮುಟ್ಟಿಸುವ ಸಲುವಾಗಿ ದಂಡವನ್ನು ದ್ವಿಗುಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಒಮ್ಮೆ ದಂಡ ಕಟ್ಟಿ ಮತ್ತೊಮ್ಮೆ ರಸ್ತೆ ಮೇಲೆ ಉಗುಳಿ ಸಿಕ್ಕಿಬಿದ್ದರೆ, ಡಬಲ್ ದಂಡ ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಮೊದಲ ಬಾರಿಗೆ ದಂಡ ಕಟ್ಟಿದವರ ಹೆಸರು, ವಿಳಾಸ, ಮೊಬೈಲ್ ನಂಬರ್‌ಗಳನ್ನು ಪಾಲಿಕೆ ಸಿಬ್ಬಂದಿ ಪಡೆದುಕೊಳ್ಳುತ್ತಾರೆ. ಸ್ಥಳದಲ್ಲೇ ದಂಡ ಕಟ್ಟಿದ್ದಕ್ಕೆ ಡಿಜಿಟಲ್ ರಶೀದಿ ಕೊಡುತ್ತಿದ್ದಾರೆ
ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಉಗುಳಿದರೆ ಮೊದಲ ಬಾರಿಗೆ 500 ರೂ. ದಂಡ. ಎರಡನೇ ಬಾರಿಗೆ 1000 ರೂ. ದಂಡ , ತಂಬಾಕು, ಗುಟ್ಕಾ ಮತ್ತು ಮದ್ಯ ಮಾರಾಟ ಮಾಡಿದರೆ 500 ರೂ. ದಂಡ, ಎರಡನೇ ಬಾರಿಗೆ 1000 ರೂ. ದಂಡ,ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಮಾಸ್ಕ್ ಧರಿಸದೆ ಇದ್ದರೆ ಮೊದಲ ಬಾರಿಗೆ 100 ರೂ. ದಂಡ, ಎರಡನೇ ಬಾರಿಗೆ 200 ರೂ. ದಂಡ ಕಟ್ಟಬೇಕಾಗುತ್ತದೆ ಅಂತಾ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಆದೇಶ ಹೊರಡಿಸಿದ್ದಾರೆ
ಇನ್ನು ಉಗುಳಿದ್ದಕ್ಕೆ, ತಂಬಾಕು ಉತ್ಪನ್ನ ಮಾರಾಟಕ್ಕೆ, ಮಾಸ್ಕ್ ತೊಡದೆ ಇದ್ದಿದ್ದಕ್ಕೆ ದಂಡ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದಂಡದ ರಶೀದಿಯ ಫೋಟೊಗಳು ವೈರಲ್ ಆಗಿದೆ.ರಶೀದಿಯಲ್ಲಿರುವ ಮೊಬೈಲ್ ನಂಬರ್‌ಗಳಿಗೆ ಸಾರ್ವಜನಿಕರು ಕರೆ ಮಾಡಿ, ನಿಜವೇ ಎಂದು ಜನರು ಪರೀಕ್ಷಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


