ಮೂಡಿಗೆರೆ: ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿ ಹತ್ಯೆ, ಆರೋಪಿ ತಮ್ಮ ಸೆರೆ
ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಜಗಳವಾಗಿ ಆ ಜಗಳ ಅಣ್ಣನ ಕೊಲೆಯೊಂದಿಗೆ ಅಂತ್ಯಕಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆ: ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಜಗಳವಾಗಿ ಆ ಜಗಳ ಅಣ್ಣನ ಕೊಲೆಯೊಂದಿಗೆ ಅಂತ್ಯಕಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಾಮದ ನಿವಾಸಿ ಮಂಜಯ್ಯ (58) ಎಂಬಾತನ ಮೇಲೆ ಆತನ ತಮ್ಮನೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸಧ್ಯ ಆರೋಪಿ ತಮ್ಮ ಲಕ್ಷ್ಮಣನನ್ನು ಪೋಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರವಾಗಿ ಇಬ್ಬರೂ ಜಗಳ ಕಾಯುತ್ತಿದ್ದರು. ಬಹಳ ದಿನಗಳಿಂದ ಇಬ್ಬರ ನಡುವೆ ವೈಮನಸ್ಯವಿದ್ದು ಸೋಮವಾರ ರಾತ್ರಿ ಸಹ ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಆ ವೇಳೆ ಲಕ್ಷ್ಮಣ ಅಣ್ಣ ಮಂಜಯ್ಯನ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಮಂಜಯ್ಯ ಸಾವಿಗೀಡಾಗಿದ್ದು ಘಟನೆ ಕುರಿತಂತೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


