ತಮ್ಮ ಉತ್ತಮ ಹವ್ಯಾಸವೊಂದನ್ನು ಹೇಳಿಕೊಂಡ ಹೆಚ್ ಡಿ ಕುಮಾರಸ್ವಾಮಿ, ಯಾವುದದು?
ಪುಸ್ತಕ ಓದುವ ಅಭ್ಯಾಸ ಉತ್ತಮ ಹವ್ಯಾಸಗಳಲ್ಲಿ ಒಂದು. ಪುಸ್ತಕ ಓದುವ ಅಭ್ಯಾಸವಿದ್ದರೆ ಜ್ಞಾನವೂ ಹೆಚ್ಚುತ್ತದೆ, ವ್ಯಕ್ತಿಯಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ, ಕೆಟ್ಟ ಯೋಚನೆಗಳು ಬರುವುದಿಲ್ಲ. ಸಮಯ ಕಳೆಯಲು ಮನುಷ್ಯನ ಒಂದು ಉತ್ತಮ ಸಂಗಾತಿ ಪುಸ್ತಕಗಳು. ಇದು ಅನುಭವಸ್ಥರು ಹೇಳುವ ಮಾತು.

ಬೆಂಗಳೂರು: ಪುಸ್ತಕ ಓದುವ ಅಭ್ಯಾಸ ಉತ್ತಮ ಹವ್ಯಾಸಗಳಲ್ಲಿ ಒಂದು. ಪುಸ್ತಕ ಓದುವ ಅಭ್ಯಾಸವಿದ್ದರೆ ಜ್ಞಾನವೂ ಹೆಚ್ಚುತ್ತದೆ, ವ್ಯಕ್ತಿಯಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ, ಕೆಟ್ಟ ಯೋಚನೆಗಳು ಬರುವುದಿಲ್ಲ. ಸಮಯ ಕಳೆಯಲು ಮನುಷ್ಯನ ಒಂದು ಉತ್ತಮ ಸಂಗಾತಿ ಪುಸ್ತಕಗಳು. ಇದು ಅನುಭವಸ್ಥರು ಹೇಳುವ ಮಾತು.
ರಾಜಕಾರಣವೆಂದರೆ ಒತ್ತಡದ ಕೆಲಸ, ದಿನದ 24 ಗಂಟೆಯೂ ಸದಾ ಒಂದಿಲ್ಲೊಂದು ವಿಚಾರ, ಮಾತುಕತೆ. ಓಡಾಟಗಳಲ್ಲಿ ರಾಜಕಾರಣಿಗಳಿರುತ್ತಾರೆ. ಈ ಮಧ್ಯೆ ಅನೇಕ ರಾಜಕಾರಣಿಗಳಿಗೆ ಓದುವ ಹವ್ಯಾಸವಿರುತ್ತದೆ. ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು, ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಲು, ಉತ್ತಮ ವಾಗ್ಮಿಗಳಾಗಲು ಪುಸ್ತಕಗಳಿಗೆ ರಾಜಕಾರಣಿಗಳು ಮೊರೆಹೋಗುತ್ತಾರೆ.
ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಹ ಪುಸ್ತಕಪ್ರಿಯರು. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಉತ್ತಮ ಪುಸ್ತಕ ಓದಿ ಸಮಯ ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇಂದು ವಿಶ್ವ ಪುಸ್ತಕ ದಿನದ ಶುಭಾಶಯಗಳನ್ನು ತಿಳಿಸಿದ ಅವರು, ನನ್ನ ಮನೆಯಲ್ಲಿ ಪುಟ್ಟ ಖಾಸಗಿ ಲೈಬ್ರೆರಿಯಿದೆ. ಅಲ್ಲಿ ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ ಎಂದು ಹೇಳಿಕೊಂಡಿದ್ದಾರೆ.
ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವಿದೆ.ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


