ಲಾಕ್ ಡೌನ್ ಸಮಯದಲ್ಲಿ ನೈರುತ್ಯ ರೈಲ್ವೆ ರಸಪ್ರಶ್ನೆ ಸ್ಪರ್ಧೆ: ಸಾರ್ವಜನಿಕರಿಗೆ ಅವಕಾಶ
ಲಾಕ್ ಡೌನ್ ಸಮಯದಲ್ಲಿ ಜನರ ಮನಸ್ಸು ಸಕ್ರಿಯವಾಗಿರಲು ನೈರುತ್ಯ ರೈಲ್ವೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ದೇಶದ ಪ್ರಮುಖ ಕಟ್ಟಡಗಳು,ವಿನ್ಯಾಸಗಳ ಫೋಟೋಗಳನ್ನು ಹಾಕಲಾಗಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಾವಣಗೆರೆ: ಲಾಕ್ ಡೌನ್ ಸಮಯದಲ್ಲಿ ಜನರ ಮನಸ್ಸು ಸಕ್ರಿಯವಾಗಿರಲು ನೈರುತ್ಯ ರೈಲ್ವೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ದೇಶದ ಪ್ರಮುಖ ಕಟ್ಟಡಗಳು,ವಿನ್ಯಾಸಗಳ ಫೋಟೋಗಳನ್ನು ಹಾಕಲಾಗಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ ವಿಜಯ, ಲಾಕ್ ಡೌನ್ ಸಮಯದಲ್ಲಿ ಜನರು ಮನೆಯೊಳಗೆ ಉದಾಸೀನದಿಂದ ಇರುವುದನ್ನು ತಪ್ಪಿಸವು ರೈಲ್ವೆ ಬಗ್ಗೆ ಇರುವ ಜನರ ಜ್ಞಾನವನ್ನು ಹೆಚ್ಚಿಸಲು ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿದಿನ ಒಂದು ಚಿತ್ರ ಆಧಾರಿತ ಪ್ರಶ್ನೆಯನ್ನು ಕೇಳುತ್ತಿದ್ದು ಅವುಗಳಿಗೆ ಒಂದು ಗಂಟೆಯೊಳಗೆ ಉತ್ತರಿಸಬೇಕು.
ವಿಜೇತರಿಗೆ ಬಹುಮಾನವಿರುತ್ತದೆ. ಲಾಕ್ ಡೌನ್ ಮುಗಿದ ನಂತರ ಪ್ರಶಸ್ತಿ ವಿತರಣೆ ಮಾಡಲಾಗುವುದು. ಪ್ರತಿದಿನ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಪ್ರತಿದಿನ ಪ್ರಶ್ನೆಯನ್ನು ನೈರುತ್ಯ ರೈಲ್ವೆ ಟ್ವೀಟ್ ಪೇಜ್ @SWRRLYಯಲ್ಲಿ ಕೇಳಲಾಗುತ್ತದೆ.ಪ್ರತಿದಿನ ರಾತ್ರಿ 8 ಗಂಟೆಯೊಳಗೆ ಪ್ರಶ್ನೆಗೆ ಉತ್ತರಿಸಬೇಕು. ಫೋಟೋಗಳು, ದೇಶದ ಪ್ರಮುಖರು, ಕಟ್ಟಡಗಳು, ಸ್ಥಳಗಳ ಫೋಟೋಗಳನ್ನು ಹಾಕಿ ಅವುಗಳಿಗೆ ಆಧಾರವಾಗಿ ಸಾಯಂಕಾಲ 7 ಗಂಟೆಗೆ ಪ್ರಶ್ನೆ ಕೇಳಲಾಗುತ್ತದೆ.ಭಾಗವಹಿಸುವವರು ರಾತ್ರಿ 8 ಗಂಟೆಯೊಳಗೆ ಉತ್ತರಿಸಬೇಕು. ಲಾಟರಿ ಎತ್ತಿ ನೈರುತ್ವ ರೈಲ್ವೆ ಅಧಿಕಾರಿಗಳು ವಿಜೇತರನ್ನು ಘೋಷಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


