ಹುಬ್ಬಳ್ಳಿ: ಟ್ರಾವೆಲ್ ಪಾಸ್ ದುರುಪಯೋಗ; ವಿವಾಹಕ್ಕೆ ಹಾಜರಾಗಿದ್ದವರಿಗೆ ಕ್ವಾರಂಟೈನ್
ಟ್ರಾವೆಲ್ ಪಾಸ್ ದುರುಪಯೋಗ ಪಡಿಸಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಒಂದೇ ಕುಟುಂಬದ 9 ಮಂದಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗಿದೆ.

ಹುಬ್ಬಳ್ಳಿ:ಟ್ರಾವೆಲ್ ಪಾಸ್ ದುರುಪಯೋಗ ಪಡಿಸಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಒಂದೇ ಕುಟುಂಬದ 9 ಮಂದಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗಿದೆ.
ಧಾರವಾಡ ಜಿಲ್ಲೆಯ ಗ್ರಾಮದ 9 ಮಂದಿ ಚೆಕ್ ಪೊಸ್ಟ್ ಗಳಲ್ಲಿ ಟ್ರಾವೆಲ್ ಪಾಸ್ ಬಳಸಿಕೊಂಡು ಸಂಚರಿಸಿ ನರೇಂದ್ರ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ.
ಡಿವೈಎಸ್ ಪಿ ರವಿ ನಾಯಕ್ ಅವರ ತಂಡ KA22Z5691 ವಾಹನವನ್ನು ಪರಿಶೀಲಿಸುವಾಗ ವಾಹನದಲ್ಲಿದ್ದವರು ಹುಬ್ಬಳ್ಳಿಯಲ್ಲಿ ಮದುವೆ ಮುಗಿಸಿ ವಾಪಸಾಗುತ್ತಿದ್ದದ್ದು ಕಂಡು ಬಂದಿದೆ. ವೈದ್ಯಕೀಯ ಕಾರಣಕ್ಕೆ ನೀಡಿದ್ದ ಪಾಸ್ ಅನ್ನು ದುರುಪಯೋಗ ಪಡಿಸಿಕೊಂಡಿದ್ದು ಗೊತ್ತಾಗಿದೆ.
ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಕುಟುಂಬವು ಜಿಲ್ಲಾಡಳಿತದಿಂದ ಪಾಸ್ ಕೋರಿತ್ತು , ಐದು ಜನರಿಗೆ ನೀಡಲಾಗಿತ್ತು ಎಂದು ಹೇಳಲಾಗಿದೆ.
5 ಮಂದಿಯ ಪಾಸ್ ಅನ್ನು 9 ಮಂದಿ ದುರುಪಯೋಗ ಪಡಿಸಿಕೊಂಡಿದ್ದಾರೆ, ವಾಹನ ಸೀಜ್ ಮಾಡಿರುವ ಪೊಲೀಸರು, ಅದರಲ್ಲಿದ್ದವರ ಗಂಟಲು ದ್ರವ ಮಾದರಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


