ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರನ್ನು ರಕ್ಷಿಸಿ: ಪ್ರಧಾನಿಗೆ ಎಚ್.ವಿಶ್ವನಾಥ್ ಪತ್ರ
ಕೊರೊನಾದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಹುಣಸೂರು: ಕೊರೊನಾದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೆಳೆಗಾರರ ಸಂಕಷ್ಟ ಕುರಿತು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು. ಅನಿವಾರ್ಯ ಎನಿಸಿದರೆ ಕೇಂದ್ರ ಸರಕಾರ ತಂಬಾಕು ಬೆಳೆಗೆ ರಜೆ ನೀಡಿ, ಬೆಳೆಗಾರರಿಗೆ ಪರಿಹಾರ ಘೋಷಿಸಬೇಕು. ಪರ್ಯಾಯ ಬೆಳೆಗೆ ಉತ್ತೇಜನ ನೀಡಬೇಕು,'' ಎಂದು ಹೇಳಿದರು.
''ತಂಬಾಕು ಕೃಷಿ ಆರಂಭಿಸಲು ರೈತರು ಸಸಿ ಮಾಡಿಕೊಂಡಿರುವ ಹೊತ್ತಲ್ಲಿ ಕೊರೊನಾ ಬಂದಿದೆ. ಇದರಿಂದ ಬೆಳೆಗೆ ಬೇಕಾದ ಸೂಕ್ತ ಔಷಧ, ಗೊಬ್ಬರದ ವ್ಯವಸ್ಥೆಯೂ ಆಗಿಲ್ಲ. ಈ ವರ್ಷ ತಂಬಾಕು ಬೆಳೆದರೂ ಅದನ್ನು ಯುರೋಪ್ ದೇಶಗಳಿಗೆ ರಫ್ತು ಮಾಡಬೇಕಿದೆ. ಆದರೆ, ಕೊರೊನಾದಿಂದ ಅಲ್ಲಿನ ಬಹುತೇಕ ದೇಶಗಳೇ ಅಸ್ತವ್ಯಸ್ತಗೊಂಡಿವೆ. ಅವು ಭಾರತದಿಂದ ಹೊಗೆಸೊಪ್ಪನ್ನು ತರಿಸಿಕೊಳ್ಳುವುದೇ ಅನಿಶ್ಚಿತವಾಗಿದೆ.
ಕರ್ನಾಟಕದಲ್ಲಿ ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಈ ಎಲ್ಲ ಕಡೆಯೂ ನಾಲ್ವರು ಸಂಸದರು ಇದ್ದಾರೆ. ಎಲ್ಲರೂ ಸೇರಿ ವಸ್ತು ಸ್ಥಿತಿ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕಿದೆ. ತಂಬಾಕು ಬೆಳೆ ಎಂಬುದು ರಾಗಿ, ಜೋಳ ಬೆಳೆದಂತಲ್ಲ. ಯಾವುದೇ ಚುನಾಯಿತ ಪ್ರತಿನಿಧಿಗಳು ಕೂಡ ಈ ವಾಸ್ತವ ಅರಿಯದೇ, ರೈತರಿಗೆ ತಂಬಾಕು ಬೆಳೆಯಿರಿ, ನಾವಿದ್ದೇವೆ ಎಂದು ಭರವಸೆ ತುಂಬಬಾರದು. ನೂರಾರು ಕೋಟಿ ರೂ.ಗಳ ವ್ಯವಹಾರ ಇಲ್ಲಿ ಅಡಗಿದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


