ಕೆ.ಆರ್ ಪುರಂ: ಬಡವರಿಗೆ ಪಡಿತರ ನೀಡುತ್ತಿದ್ದ ದಲಿತ ವ್ಯಕ್ತಿ ಮೇಲೆ ಹಲ್ಲೆ
ತನ್ನ ಸ್ನೇಹಿತರ ಜೊತೆಗೂಡಿ ಬಡವರಿಗೆ ಹಾಲು ಹಂಚುತ್ತಿದ್ದ ವ್ಯಕ್ತಿಗೆ ಉದ್ಯಮಿಯೊಬ್ಬ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ.

ಬೆಂಗಳೂರು: ತನ್ನ ಸ್ನೇಹಿತರ ಜೊತೆಗೂಡಿ ಬಡವರಿಗೆ ಹಾಲು ಹಂಚುತ್ತಿದ್ದ ವ್ಯಕ್ತಿಗೆ ಉದ್ಯಮಿಯೊಬ್ಬ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ.
ಅನಿಲ್ ಕುಮಾರ್ ತಮ್ಮ ಸ್ನೇಹಿತರೊಂದಿಗೆ ಸೇರಿ ಬಡವರಿಗೆ ಹಾಲು ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿದ್ದರು. ಪ್ಯಾಕ್ ಮಾಡಿದ ಆಹಾರ ಪಟ್ಟಣ ಮತ್ತು ರೇಷನ್ ವಾಹನವನ್ನು ರಾಧಾಕೃಷ್ಣ ರೆಡ್ಡಿ ಎಂಬುವರ ಮನೆ ಮುಂದೆ ನಿಲ್ಲಿಸಿದ್ದರು.
ವಾಹನ ನೋಡಿದ ರಾಧಾಕೃಷ್ಣ ರೆಡ್ಡಿ, ಅನಿಲ್ ಅವರನ್ನು ನಿಂದಿಸಿದ್ದಾರೆ. ಅನಿಲ್ ಕೆಳ ಜಾತಿಯವನು ಹೀಗಾಗಿ ಆತನಿಂದ ಯಾವ ವಸ್ತುವನ್ನು ತೆಗೆದುಕೊಳ್ಳದಂತೆ ಸ್ಥಳೀಯರಿಗೆ ಹೇಳಿ, ತನ್ನ ಕುಟುಂಬದ ಮೂವರೊಂದಿಗೆ ಸೇರಿ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.ಅನಿಲ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


