ತಬ್ಲೀಘಿನದ್ದು ವೈರಸ್ ಜಿಹಾದಾ?: ಸಂಸದ ಅಭಿಪ್ರಾಯ!
ಕೊರೊನಾ ವೈರಸ್ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.

ಶಿರಸಿ: ಕೊರೊನಾ ವೈರಸ್ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.
ಇಸ್ಲಾಮ್ ರಾಜಕಾರಣ!!!
ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೋನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ...! ಈ ಮಾರಣಾಂತಿಕ ಸೋಂಕುರೋಗ ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ ಹರಡುತ್ತಿದೆ...! ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ...
ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !
ಅದೇ ರೀತಿ ಕೊರೋನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಖಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು... ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !
ಕೊರೋನಾ ಎಂಬ ನಿಗೂಢ ವೈರಸ್ಸಿನಿಂದ ಉಂಟಾಗಬಹುದಾದ ಅಪಾಯದ ಅರಿವೇ ಇಲ್ಲದೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ವಿಜ್ಞಾನಿಗಳು, ವೈದ್ಯರು ಹೇಗೆ ಸೋತು ಹೋದರೋ... ಅದೇ ರೀತಿ ತಬ್ಲೀಘಿ ಜಮಾತ್ ಎಂಬ ರಹಸ್ಯ ಸಂಘಟನೆ ಮತ್ತು ಇಸ್ಲಾಮ್ ಎಂಬ ಅಪಾಯಕಾರೀ ಮತವನ್ನು, ಅದು ಇಡೀ
ಮಾನವಜನಾಂಗಕ್ಕೆ ತಂದೊಡ್ಡಲಿರುವ ಗಂಡಾಂತರವನ್ನು ಅಂದಾಜಿಸುವಲ್ಲಿ ಇಡೀ ಪ್ರಪಂಚದ ಅಷ್ಟೂ ರಾಜಕಾರಣಿಗಳು, ರಾಜತಂತ್ರಜ್ಞರು, ಮುತ್ಸದ್ದಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಅನ್ನಿಸುತ್ತಿದೆ. ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವಕೊರೋನಾ ವೈರಸ್ಸು ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ, ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೇ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್, ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ.
ಕೊರೊನಾ ವೈರಸ್ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.
.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


