ರಾಜ್ಯ

ಉಡುಪಿ: ಬರಿದಾಗುತ್ತಿರುವ ಶಿರೂರು ಅಣೆಕಟ್ಟು

ಬೇಸಿಗೆಯ ತಾಪ ಉಡುಪಿ ಜಿಲ್ಲೆಯ ಶಿರೂರು ಅಣೆಕಟ್ಟು ಬತ್ತಿ ಹೋಗುವಂತೆ ಮಾಡಿದೆ. ಬಜೆ ಅಣೆಕಟ್ಟಿನ ಮೂಲಕ ನೀರನ್ನು ಉಡುಪಿ ನಗರದ 35 ವಾರ್ಡ್ ಗಳಿಗೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದ್ದು ಏಪ್ರಿಲ್ 9ರಿಂದ ಪಂಪ್ ಮೂಲಕ ಪಂಚನಬೆಟ್ಟು ಪ್ರದೇಶವಾಗಿ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ.

ಉಡುಪಿ: ಬರಿದಾಗುತ್ತಿರುವ ಶಿರೂರು ಅಣೆಕಟ್ಟು
ಪಂಚನಬೆಟ್ಟುವಿನಲ್ಲಿ ಪಂಪ್ ಸೆಟ್ ಮೂಲಕ ಜಲಾಶಯಕ್ಕೆ ನೀರು ಹಾಯಿಸುತ್ತಿರುವುದು
Published On :

ಉಡುಪಿ: ಬೇಸಿಗೆಯ ತಾಪ ಉಡುಪಿ ಜಿಲ್ಲೆಯ ಶಿರೂರು ಅಣೆಕಟ್ಟು ಬತ್ತಿ ಹೋಗುವಂತೆ ಮಾಡಿದೆ. ಬಜೆ ಅಣೆಕಟ್ಟಿನ ಮೂಲಕ ನೀರನ್ನು ಉಡುಪಿ ನಗರದ 35 ವಾರ್ಡ್ ಗಳಿಗೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದ್ದು ಏಪ್ರಿಲ್ 9ರಿಂದ ಪಂಪ್ ಮೂಲಕ ಪಂಚನಬೆಟ್ಟು ಪ್ರದೇಶವಾಗಿ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ.

ಉಡುಪಿ ನಗರ ಪಾಲಿಕೆಯ ಅಧಿಕಾರಿಗಳು ಬೇಸಿಗೆ ಮುಂದುವರಿದರೆ ಮಳೆ ಕೊರತೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎಂಬ ಆತಂಕದಲ್ಲಿದ್ದಾರೆ. ಕಾರ್ಕಳ ಜಲಾನಯದ ಪ್ರದೇಶದಲ್ಲಿ ಬೀಳುವ ಮಳೆಯನ್ನಾಧರಿಸಿ ಉಡುಪಿ ನಗರ  ಪ್ರದೇಶಕ್ಕೆ ಕುಡಿಯುವ ನೀರು ಅವಲಂಬಿಸಿದೆ.

ಬಜೆ ಅಣೆಕಟ್ಟಿನಲ್ಲಿ ಮೊನ್ನೆ ಏಪ್ರಿಲ್ 9ಕ್ಕೆ 4.49 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮೇ 4ರಂದು ಬಜೆ ಅಣೆಕಟ್ಟಿನಿಂದ ನಾಲ್ಕು ದಿನಗಳ ಕಾಲ ಉಡುಪಿ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಆ ರೀತಿ ನೀರಿನ ಕೊರತೆಯುಂಟಾಗಬಾರದೆಂದು ಪಂಪ್ ಮೂಲಕ ನೀರು ಹಾಯಿಸಲು ಉಡುಪಿ ನಗರ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.