ವಿಜಯಪುರ: ಪೊಲೀಸ್ ಚೆಕ್ ಪೋಸ್ಟ್ ತಪ್ಪಿಸಲು ನದಿಗೆ ಹಾರಿ ಪ್ರಾಣಬಿಟ್ಟ ದುರ್ದೈವಿ
ಹೆಂಡತಿ ಮಕ್ಕಳನ್ನು ನೋಡಲು ಊರಿಗೆ ಹೋಗಿ ವಾಪಸ್ ಬರುವಾಗ ಪೊಲೀಸ್ ಚೆಕ್ ಪೋಸ್ಟ್ ತಪ್ಪಿಸಲು ವ್ಯಕ್ತಿಯೊಬ್ಬ ನೀರಿಗೆ ಹಾರಿ ಈಜಲುಯತ್ನಿಸಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ: ಹೆಂಡತಿ ಮಕ್ಕಳನ್ನು ನೋಡಲು ಊರಿಗೆ ಹೋಗಿ ವಾಪಸ್ ಬರುವಾಗ ಪೊಲೀಸ್ ಚೆಕ್ ಪೋಸ್ಟ್ ತಪ್ಪಿಸಲು ವ್ಯಕ್ತಿಯೊಬ್ಬ ನೀರಿಗೆ ಹಾರಿ ಈಜಲುಯತ್ನಿಸಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ನಿವಾಸಿ ಮಲ್ಲಪ್ಪ ಬೊಮ್ಮಾಡಿ ಮೃತ ದುರ್ದೈವಿ. ಮುದ್ದೆಬಿಹಾಳ ತಾಲೂಕಿನಲ್ಲಿರುವ ತಮ್ಮ ಮಾವನ ಮನೆಗೆ ತೆರಳಿ ಪತ್ನಿಯನ್ನು ಭೇಟಿ ಮಾಡಿ ವಾಪಾಸಾಗುವಾಗ ಈ ದುರ್ಘಟನೆ ನಡೆದಿದೆ.
ಪತ್ನಿಯ ಮನೆಯಿಂದ ತಮ್ಮ ಮನೆಗೆ ವಾಪಾಸಾಗುವಾಗ ತಂಗಡಗಿ ಬ್ರಿಡ್ಜ್ ಬಳಿ ಯ ಚೆಕ್ ಪೋಸ್ಟ್ ಪೊಲೀಸರು ತಡೆದಿದ್ದಾರೆ. ಲಾಕ್ ಡೌನ್ ಇರುವುದರಿಂದ ವಾಪಸ್ ಮಾವನ ಮನೆಗೆ ತೆರಳಲು ಸೂಚಿಸಿದ್ದಾರೆ.
ಆದರೆ ವಾಪಸ್ ತೆರಳಲು ಒಪ್ಪದ ಆತ ಚೆಕ್ ಪೋಸ್ಟ್ ತಪ್ಪಿಸಿಕೊಂಡು ಹೋಗಲು ನದಿಗೆ ಹಾರಿದ್ದಾನೆ. ಆದರೆ ಅರ್ಧ ನದಿ ಈಜುವಷ್ಟರಲ್ಲಿ ದೇಹದ ಶಕ್ತಿ ಕುಗ್ಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನ ಶವ ಪತ್ತೆ ಮಾಡಿದ್ದಾರೆ, ಮುದ್ದೆ ಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


