100 ಕಿ.ಮೀ ನಡೆದುಕೊಂಡು ಬಂದು ಮಂಗಳೂರು ಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಉ.ಕ ಕಾರ್ಮಿಕರು
ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಗೆ ತೆರಳಲು ಕೇರಳದಿಂದ ಹೊರಟ 16 ಮಂದಿ ಕೂಲಿ ಕಾರ್ಮಿಕರು ಮಂಜೇಶ್ವರದ ಹತ್ತಿರ ತಳಪಾಡಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದಾರೆ.

ಬೆಂಗಳೂರು: ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಗೆ ತೆರಳಲು ಕೇರಳದಿಂದ ಹೊರಟ 16 ಮಂದಿ ಕೂಲಿ ಕಾರ್ಮಿಕರು ಮಂಜೇಶ್ವರದ ಹತ್ತಿರ ತಳಪಾಡಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದಾರೆ.
ಕೇರಳ ಮತ್ತು ಕರ್ನಾಟಕ ಮಧ್ಯೆ ಸದ್ಯ ಗಡಿ ಸಮಸ್ಯೆ ಇರುವುದರಿಂದ ಮಂಗಳೂರು ಪೊಲೀಸರು ಅವರನ್ನು ಗಡಿಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ.
ವಲಸೆ ಕೂಲಿ ಕಾರ್ಮಿಕರನ್ನು ಮಂಗಳೂರು ಒಳಗೆ ಪ್ರವೇಶಿಸಲು ಬಿಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿರುವುದಕ್ಕೂ ಪಕ್ಕದ ಕೊಡಗು ಜಿಲ್ಲಾಡಳಿತದ ನಿರ್ಧಾರಕ್ಕೂ ವ್ಯತ್ಯಾಸವಿದೆ. ಕೊಡಗು ಜಿಲ್ಲೆಯಲ್ಲಿ ಸದ್ಯ ಕೇರಳದ ನೂರಾರು ವಲಸೆ ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದಾರೆ.
ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿರುವುದರಿಂದ ಗಡಿಯನ್ನು ಬಂದ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಕಾಸರಗೋಡಿನಲ್ಲಿ 110ಕ್ಕೂ ಹೆಚ್ಚು ಕೊರೋನಾ ಪೀಡಿತರಿದ್ದಾರೆ. ಧಾರವಾಡ, ಕೊಪ್ಪಳ, ಗದಗ ಮತ್ತು ಇತರ ಜಿಲ್ಲೆಗಳ ವಲಸೆ ಕಾರ್ಮಿಕರು ಕಾಸರಗೋಡಿನ ನೀಲೇಶ್ವರಕ್ಕೆ ಕೆಲಸಕ್ಕೆ ವಲಸೆ ಹೋಗಿದ್ದರು. ಇದೀಗ ಲಾಕ್ ಡೌನ್ ಆಗಿರುವುದರಿಂದ ತಮ್ಮ ದಿನಗೂಲಿ ಕೆಲಸಕ್ಕೆ ಕುತ್ತು ಬಂದು ಊರಿಗೆ ಹೋಗಲು ಸಿದ್ದವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


