ರಾಜ್ಯ

ಕೊರೋನಾ ಸೋಂಕಿಗೆ 'ಅರಶಿನ' ಒಳ್ಳೆ ಮದ್ದು: ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ರೈತರಲ್ಲಿ ಸಂತಸ

ಕೊರೋನಾ ವೈರಸ್ ಹಾವಳಿಯಿಂದ ಎಲ್ಲಾ ಕ್ಷೇತ್ರಗಳಿಗೂ ಆರ್ಥಿಕ ಬಿಸಿ ತಟ್ಟಿದೆ, ರೈತರು ಕೂಡ ಇದಕ್ಕೆ ಹೊರತಲ್ಲ, ಆದರೆ ಅರಶಿನ ಬೆಳೆಯುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೊರೋನಾ ಸೋಂಕಿಗೆ 'ಅರಶಿನ' ಒಳ್ಳೆ ಮದ್ದು: ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ರೈತರಲ್ಲಿ ಸಂತಸ
Published On :

ಬೆಂಗಳೂರು: ಕೊರೋನಾ ವೈರಸ್ ಹಾವಳಿಯಿಂದ ಎಲ್ಲಾ ಕ್ಷೇತ್ರಗಳಿಗೂ ಆರ್ಥಿಕ ಬಿಸಿ ತಟ್ಟಿದೆ, ರೈತರು ಕೂಡ ಇದಕ್ಕೆ ಹೊರತಲ್ಲ, ಆದರೆ ಅರಶಿನ ಬೆಳೆಯುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು, ರೋಗಾಣು ತಡೆಗಟ್ಟುವ ಗುಣ ಹಸಿ ಅರಶಿನದಲ್ಲಿದೆ ಎಂಬ ಸುದ್ದಿ ಸಾಕಷ್ಟು ಹರಿದಾಡುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಅರಶಿನಕ್ಕೆ ಬೇಡಿಕೆ ಹೆಚ್ಚಿರುವುದೇ ಇದನ್ನು ಬೆಳೆಯುವ ರೈತರ ಪಾಲಿಗೆ ವರದಾನವಾಗಿದೆ.ಔಷಧ ಕಂಪೆನಿಗಳಿಂದಲೂ ಅರಶಿನಕ್ಕೆ ಬೇಡಿಕೆ ಬರುತ್ತಿವೆಯಂತೆ.

ಆಂಧ್ರಪ್ರದೇಶ ಸರ್ಕಾರ ಚಿಂತಪಳ್ಳಿಯಲ್ಲಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಜೈವಿಕವಾಗಿ ಅರಶಿನ ಬೆಳೆಸಿ ಔಷಧ ತಯಾರಿಕಾ ಉದ್ಯಮಗಳಿಗೆ ಪೂರೈಸುವಂತೆ ಕೇಳಿಕೊಂಡಿದೆ. ಕರ್ನಾಟಕದಲ್ಲಿ ಇಂತಹ ಕ್ರಮಗಳೇನಾದರೂ ಆಗಿವೆಯೇ ಎಂದು ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾತನಾಡಿಸಿದಾಗ, ಆಂಧ್ರ ಪ್ರದೇಶ ಸರ್ಕಾರದ್ದು ಉತ್ತಮ ಯೋಜನೆ, ಕರ್ನಾಟಕ ಸರ್ಕಾರದಿಂದ ಇಂತಹ ಕ್ರಮಗಳ ಬಗ್ಗೆ ಇದುವರೆಗೆ ಯಾವುದೇ ಪ್ರಕಟಣೆ ಹೊರಬಂದಿಲ್ಲ, ಕರ್ನಾಟಕದ ಬೀದರ್, ಚಾಮರಾಜನಗರ, ಬಾಗಲಕೋಟೆ, ಮೈಸೂರು, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಅರಶಿನ ಬೆಳೆಯುತ್ತಾರೆ. ಅರಶಿನಕ್ಕೆ ಬೇಡಿಕೆ ಹೆಚ್ಚಾದರೆ ಒಳ್ಳೆಯದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.