18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ: ರಾಜ್ಯ ಸರ್ಕಾರ ಘೋಷಣೆ
2019ರ ಮುಂಗಾರು ಋತುವಿನಲ್ಲಿ ಭಾರೀ ಮಳೆ, ಪ್ರವಾಹದ ನಡುವೆಯೂ 18 ಜಿಲ್ಲೆಗಳ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ ಭಾರೀ ಮಳೆ, ಪ್ರವಾಹದ ನಡುವೆಯೂ 18 ಜಿಲ್ಲೆಗಳ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಬರ ಪರಿಸ್ಥಿತಿ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದರು.
ಯಾವ ಜಿಲ್ಲೆಯ ಯಾವ ತಾಲೂಕು ಬರಪೀಡಿತ:
ಬೆಂ.ನಗರ ಜಿಲ್ಲೆ- ಆನೇಕಲ್, ಬೆಂ.ಉತ್ತರ ಹಾಗು ಬೆಂ.ಪೂರ್ವ ತಾಲೂಕು
ಬೆಂ.ಗ್ರಾಮಾಂತರ- ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
ರಾಮನಗರ- ಕನಕಪುರ, ರಾಮನಗರ
ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
ತುಮಕೂರು- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
ದಾವಣಗೆರೆ- ಜಗಳೂರು
ಚಾಮರಾಜನಗರ- ಕೊಳ್ಳೆಗಾಲ
ಬಳ್ಳಾರಿ- ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
ಕೊಪ್ಪಳ- ಗಂಗಾವತಿ
ರಾಯಚೂರು- ಮಾನ್ವಿ, ರಾಯಚೂರು, ಸಿಂಧನೂರು
ಕಲಬುರಗಿ- ಚಿಂಚೋಳಿ, ಜೇವರ್ಗಿ, ಸೇಡಂ
ಯಾದಗಿರಿ- ಯಾದಗಿರಿ
ಬೆಳಗಾವಿ- ಅಥಣಿ
ಬಾಗಲಕೋಟೆ- ಬಾದಾಮಿ, ಬಿಳಗಿ, ಜಮಖಂಡಿ
ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
ಗದಗ- ನರಗುಂದ
ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:
ಬೆಂಗಳೂರಿನ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್ ಗೆ 150/100 ವಿಸ್ತೀರ್ಣದ ಜಮೀನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ ಹಣವನ್ನು ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ ಹಣವನ್ನು ಕ್ಲಬ್ ಸರ್ಕಾರಕ್ಕೆ ಕೊಡಬೇಕಾಗಿದೆ. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


