'ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಗೆ ಸಜ್ಜಾಗಿದೆ ಅರಮನೆಯ ಸುವರ್ಣ ಸಿಂಹಾಸನ'
ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಾಜವಂಶಸ್ಥರ ಖಾಸಗಿ ದರ್ಬಾರ್ಗೆ ಸಿದ್ಧತೆಗಳು ಆರಂಭಗೊಂಡಿದ್ದು, ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ

ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಾಜವಂಶಸ್ಥರ ಖಾಸಗಿ ದರ್ಬಾರ್ಗೆ ಸಿದ್ಧತೆಗಳು ಆರಂಭಗೊಂಡಿದ್ದು, ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
ದಸರಾ ಉದ್ಘಾಟನೆ ಇನ್ನು 5 ದಿನ ಬಾಕಿ ಉಳಿದಿರುವಂತೆಯೇ ಭದ್ರತಾ ಕೋಣೆಯಲ್ಲಿದ್ದ ಚಿನ್ನದ ಸಿಂಹಾಸನವನ್ನು ಹೊರ ತೆಗೆದು ಅರಮನೆಯ ದರ್ಬಾರ್ ಹಾಲ್ನಲ್ಲಿ ಇಡಲಾಗಿದೆ..
ಬೆಳಗ್ಗೆ 10.45ರಿಂದ 11.30ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಜೋಡಣೆ ಕಾರ್ಯ ಆರಂಭವಾಗಿದ್ದು, ದಸರಾ ಉದ್ಘಾಟನೆ ದಿನ ಸೆ.29ರಂದು ಪೂರ್ಣ ಪ್ರಮಾಣದಲ್ಲಿ ಆಸನಕ್ಕೆ ಸಿಂಹಗಳನ್ನು ಜೋಡಣೆ ಮಾಡಿ ಪೂಜೆ ನೆರವೇರಿಸಿದ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಲಿದ್ದಾರೆ.
ಸೆಪ್ಟಂಬರ್ 29 ರಂದು ಅರಮನೆಯಲ್ಲಿ ಸಂಪ್ರದಾಯಬದ್ದವಾದ ವಿಧಿ ವಿಧಾನಗಳು ನಡೆಯಲಿದ್ದು, ಬೆಳಗ್ಗೆ 8.10ಕ್ಕೆ ನವಗ್ರಹ ಹೋಮದೊಂದಿಗೆ ಆರಂಭವಾಗಲಿದೆ, ಯಧುವೀರ್ ಶ್ರೀಕಂಠದತ್ತ ಒಡೆಯರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.
ಸಿಂಹಾಸನವನ್ನು 14 ಭಾಗಗಳಾಗಿ ಮಾಡಲಾಗಿರುತ್ತದೆ, ಛತ್ರಿ, ಪ್ರಮುಖ ಕುರ್ಚಿ, ಅವುಗಳಲ್ಲಿ ಪ್ರಮುಖವಾದವು, ಚಿನ್ನದ ಸಿಂಹಾಸನದಲ್ಲಿರುವ ಸೀಟ್ ಅನ್ನು ಅಯಾಯಾ ರಾಜರುಗಳ ಗಾತ್ರಕ್ಕೆ ಅನುಸಾರವಾಗಿ ಆಯಾಯಾ ಕಾಲಘಟ್ಟಗಳಲ್ಲಿ ಬದಲಾಯಿಸಲಾಗಿತ್ತು.
ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಎಂಬ್ರಾಯ್ಡರಿ ಮಾಡಿರುವ ಬಟ್ಟೆಹಗಳಲ್ಲಿ ಸಿಂಗರಿಸಿ, ಅರಮನೆಗೆ ಕರೆತಂದು ಪೂಜೆ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


