ಬೆಳಗಾವಿ: ನೆರೆ ಪರಿಹಾರ ಕೇಂದ್ರದಲ್ಲಿದ್ದ 4 ವರ್ಷದ ಮಗು ಸಾವು
ಬೆಳಗಾವಿಯ ರಾಮದುರ್ಗಾ ತಾಲೂಕಿನಲ್ಲಿ ಸರ್ಕಾರ ರಚಿಸಿದ್ದ ನೆರೆ ಪರಿಹಾರ ಕೇಂದ್ರದಲ್ಲಿದ್ದ 4 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಬೆಳಗಾವಿ: ಬೆಳಗಾವಿಯ ರಾಮದುರ್ಗಾ ತಾಲೂಕಿನಲ್ಲಿ ಸರ್ಕಾರ ರಚಿಸಿದ್ದ ನೆರೆ ಪರಿಹಾರ ಕೇಂದ್ರದಲ್ಲಿದ್ದ 4 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಹಲವು ದಿನಗಳಿಂದಲೂ ಮಗು ಅತೀವ್ರ ಜ್ವರದಿಂದ ಬಳಲುತ್ತಿತ್ತು. ಬಾಲಕನಿಗೆ ಜ್ವರ ಬಂದಾಗ ಚಿಕಿತ್ಸೆಗಾಗಿ ಪೋಷಕರು ಪರದಾಡಿದ್ದರು. ಆದರೆ, ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆಗಳು ದೊರೆಯಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಆದರೆ ಆರೋಪಗಳನ್ನು ಅಧಿಕಾರಿಗಳು ಅಲ್ಲಗೆಳೆದಿದ್ದು, ಅತೀವ್ರ ಜ್ವರದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ರಾಮದುರ್ಗಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಮಗುವಿನ ಪೋಷಕರಿಗೆ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


