ಮೈಸೂರು: ಪ್ರೀತಿಗೆ ಕುಟುಂಬದ ವಿರೋಧ, ಲಕ್ಷ್ಮಣತೀರ್ಥಕ್ಕೆ ಹಾರಿ ಪ್ರೇಮಿಗಳ ಆತ್ಮಹತ್ಯೆ!
ಪ್ರೀತಿಗೆ ಕುಟುಂಬ ಸದಸ್ಯರು ವಿರೋಧಿಸಿದ್ದ ಹಿನ್ನೆಲೆ ಬೇಸರಗೊಂಡ ಪ್ರೇಮಿಗಳು ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರು: ಪ್ರೀತಿಗೆ ಕುಟುಂಬ ಸದಸ್ಯರು ವಿರೋಧಿಸಿದ್ದ ಹಿನ್ನೆಲೆ ಬೇಸರಗೊಂಡ ಪ್ರೇಮಿಗಳು ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಹೊಸೂರು ಕಲ್ಲಹಳ್ಳಿಯ ರಂಜಿತಾ (19) ಮತ್ತು ಮೈಸೂರು ವಿಜಯನಗರ ನಿವಾಸಿ ಶಿವು (21) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರ ವಿವಾಹಕ್ಕೆ ಇಬ್ಬರ ಕುಟುಂಬದಲ್ಲಿಯೂ ಸಮ್ಮತಿ ಇರಲಿಲ್ಲ. ಹಾಗಾಗಿ ತಾವು ಆತ್ಮಹತ್ಯೆ ದಾರಿ ಹಿಡಿದರೆಂದು ಹೇಳಲಾಗಿದೆ.
ಈ ಯುವಜೋಡಿ ಮೈಸೂರಿನ ಸಾಗರಕಟ್ಟೆ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿ ಸಮೀಪಕ್ಕೆ ತೆರಳಿದ್ದು ಸೋಮವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕೆ ಹುಡುಕಾಟ ನಡೆಸಿದ್ದಾರೆ. ಘಟನೆ ಕುರಿತಂತೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


