ನಾಡಹಬ್ಬ ದಸರಾಗೆ ವಿಶ್ವಚಾಂಪಿಯನ್ ತಾರೆ: ಯುವ ದಸರಾಗೆ ಚಾಲನೆ ನೀಡಲಿರುವ ಪಿವಿ ಸಿಂಧು
ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ

ಬೆಂಗಳೂರು: ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ
ಈ ಸಂಬಂಧ ಸಿಂಧು ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ
ರಾಜ್ಯ ಸರ್ಕಾರ ಆಯೋಜಿಸಿರುವ ದಸರಾ ಉತ್ಸವ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ವಿಶ್ವಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ,ಇದೊಂದು ಸಂಪ್ರದಾಯ,ಸಾಂಸ್ಕೃತಿಕ,ಕಲೆ ಹಾಗೂ ಧಾರ್ಮಿಕ ಉತ್ಸವವಾಗಿದ್ದು, ಒಂಭತ್ತು ದಿನಗಳ ಕಾಲ ನಡೆಯುವ ಈ ಆಚರಣೆ ರಾಜ್ಯದ ಪ್ರತಿಷ್ಠೆಯಾಗಿದೆ.ಪೀಳಿಗೆಯಿಂದ ಪೀಳಿಗೆ ನಡೆಸಿಕೊಂಡು ಬರುತ್ತಿರುವ ದಸರ ಉತ್ಸವಕ್ಕೆ ಹಲವಾರು ಸಾಧಕರು ಸಾಕ್ಷಿಯಾಗಿದ್ದಾರೆ.
ಕ್ರೀಡಾ ತಾರೆಯಾಗಿರುವ ತಾವು ದೇಶವೇ ಹೆಮ್ಮೆಪಡುವಂತೆ ವಿಶ್ವ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದೀರಿ.ಯುವ ದಸರಾಕ್ಕೆ ತಾವು ಆಗಮಿಸುವುದರಿಂದ ಯುವ ಮನಸುಗಳಿಗೆ ಗುರಿಗ ತಲುಪಿ ಸಾಧನೆ ಮಾಡಲು ಪ್ರೇರಣೆ ದೊರೆಯಲಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


