ಮಂಡ್ಯ: 100 ರು. ಕೂಲಿ ಬಾಕಿ ನೀಡಿಲ್ಲವೆಂದು ಆಳುಗಳಿಂದ ರೈತನ ಬರ್ಬರ ಹತ್ಯೆ!
ಕೇವಲ 100 ರು. ಕೂಲಿ ಬಾಕಿ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಳುಗಳೇ ರೈತನೊಬ್ಬನ ಬರ್ಬರ ಕೊಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ: ಕೇವಲ 100 ರು. ಕೂಲಿ ಬಾಕಿ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಳುಗಳೇ ರೈತನೊಬ್ಬನ ಬರ್ಬರ ಕೊಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಟಹಳ್ಳಿ ಗ್ರಾಮದ ಬಸವರಾಜು (40) ಎಂಬಾತ ಮೃತಪಟ್ಟ ರೈತನಾಗಿದ್ದು ಕೂಲಿ ಬಾಕಿ ನೀಡುವ ವಿಚಾರದಲ್ಲಿ ಆಳುಗಳ ಃಆಗೂ ಬಸವರಾಜು ನಡುವೆ ಗಲಾಟೆಯಾಗಿ ಆಳುಗಳಾದ ಶಿವು,ನಾಗರಾಜು ಮತ್ತು ಗವಿರಂಗೇಗೌಡ ಬಸವರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ರೈತ ಬಸವರಾಜು ತನ್ನ ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳಿಗೆ 500 ರು. ಕೂಲಿ ನೀಡುವುದಾಗಿ ಹೇಳಿದ್ದು ಅದರಲ್ಲಿ 400 ರು. ನೀಡಿದ್ದಾನೆ. ಮತ್ತೆ ಬಾಕಿ 100 ಸಂಜೆ ನೀಡುವುದಾಗಿ ಹೇಳಿದ್ದಾನೆ. ಆದರೆ ಸಂಜೆ ವೇಳೆ ಬಾಕಿ ಮೊತ್ತಕ್ಕಾಗಿ ಬಸವರಾಜು ಹಾಗೂ ಆಳುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಳುಗಳು ಬಸವರಾಜು ಮೇಲೆ ಹಲ್ಲೆ ಮಾಡಿದ್ದು ಪಕ್ಕದ ಲಾರಿಯಲ್ಲಿದ್ದ ಕಬ್ಬಿನ ಜಲ್ಲೆಯಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ಬಸವರಾಜುವನ್ನು ಕೂಡಲೇ ಗ್ರಾಮನ್ಸ್ಥರು ಕಿಕ್ಕೇರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


